ಹಣ ಡ್ರಾ ಮಾಡಲು OTP ಅಪ್ಲೈ?

ಶುಕ್ರವಾರ, 20 ಮೇ 2022 (10:50 IST)
ಬೆಂಗಳೂರು : ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಆನ್ಲೈನ್ ವಂಚನೆ ಕೂಡ ಹೆಚ್ಚಾಗುತ್ತಿದೆ.
 
ಬ್ಯಾಂಕ್ ಪಾಸ್, ಎಟಿಎಂ ಮೂಲಕ ಹಣ ಡ್ರಾ ವಿಚಾರದಲ್ಲೂ ಸಾಕಷ್ಟು ತೊಂದರೆ ಜೊತೆಗೆ ಮೋಸವಾಗಿರುವುದು ಕೂಡ ವರದಿ ಆಗಿವೆ. ಹೀಗಾಗಿ ಎಟಿಎಂ ವಹಿವಾಟಿನಲ್ಲಿ ಹೆಚ್ಚು ಸುರಕ್ಷತೆ ತರಲು ಎಸ್ಬಿಐ ಹೊಸ ನಿಯಮ ಜಾರಿಗೆ ತಂದಿದೆ.

ಎಟಿಎಂ ಹಣ ಡ್ರಾ ನಿಯಮಗಳಲ್ಲಿ ಬದಲಾವಣೆ ತಂದಿದೆ. ಎಸ್ಬಿಐ ಎಟಿಯಂನಲ್ಲಿ ಹಣ ಡ್ರಾ ಮಾಡಲು ಓಟಿಪಿ ನಿಯಮ ಜಾರಿಗೆ ತಂದಿದೆ.

ಹೌದು, ಎಟಿಎಂ ಮೂಲಕ ಜನ ಒಮ್ಮೆಗೆ 20 ರಿಂದ 25 ಸಾವಿರ ಡ್ರಾ ಮಾಡುತ್ತಿದ್ದರು. ಮಧ್ಯರಾತ್ರಿಯಲ್ಲಿ ಬೇರೆ ಅವರ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿದರೂ ಗೊತ್ತಾಗುತ್ತಿರಲಿಲ್ಲ.

ಆದರೀಗ ಮಧ್ಯರಾತ್ರಿಯಲ್ಲಿ ಬೇರೆ ಅವರ ಎಟಿಎಂ ಕಾರ್ಡ್ ಕದ್ದರು ಹಣ ಡ್ರಾ ಮಾಡುವುದು ಕಷ್ಟ. ಕಾರಣ ಎಸ್ಬಿಐ ಹೊಸ ನಿಯಮ. ಎಸ್ಬಿಐ ಎಟಿಎಂನಿಂದ ಹಣವನ್ನು ಪಡೆಯಲು ಓಟಿಪಿ ನಂಬರ್ ಅನ್ನು ನಮೂದಿಸಬೇಕು. ಈಗ ಹೊಸ ನಿಯಮದ ಪ್ರಕಾರ ಗ್ರಾಹಕರು ಓಟಿಪಿ ಇಲ್ಲದೇ ನಗದು ಹಿಂಪಡೆಯುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ