ಆ್ಯಪ್ ಬ್ಯಾನ್ ಬಳಿಕ ಚೀನಾಕ್ಕೆ ಭಾರತದ ಕಡೆಯಿಂದ ಮತ್ತೊಂದು ಶಾಕ್

ಗುರುವಾರ, 2 ಜುಲೈ 2020 (10:25 IST)
ನವದೆಹಲಿ : 59 ಮೊಬೈಲ್ ಆ್ಯಪ್ ಗಳನ್ನು ಬ್ಯಾನ್ ಮಾಡಿದ ಭಾರತ ಇದೀಗ ಚೀನಾಕ್ಕೆ ಮತ್ತೊಂದು ಬಗ್ ಶಾಕ್ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಚೀನಾ ಕಂಪೆನಿಗಳಿಗೆ ಅನುಮತಿ ನೀಡುವುದಿಲ್ಲ. ಅಲ್ಲದೇ ಚೀನಾದ ಹೂಡಿಕೆ ಇರುವ ಸಹಭಾಗಿತ್ವದ ಕಂಪೆನಿಗೂ ಇದು ಅನ್ವಯವಾಗುತ್ತದೆ. ಹಾಗೇ ಮೈಕ್ರೋ, ಸಣ್ಣ, ಮಧ್ಯಮ ಉದ್ಯಮಗಳಲ್ಲೂ ಚೀನಾಗೆ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಖಾತೆಯ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈಗಾಗಲೇ  ಚೀನಾ ಕಂಪೆನಿಗಳ ಜೊತೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಆಗುತ್ತಿರುವ ಯೋಜನೆಗಳ ಮೇಲೆ ಈ ನಿಷೇಧ ಪರಿಣಾಮ ಬೀರುವಿದಿಲ್ಲ. ಮುಂದಿನ ಯೋಜನೆ ಮತ್ತು ಟೆಂಡರ್ ನೀಡುವಾಗ ಇವುಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ