ರಾಮಮಂದಿರ ನಿರ್ಮಾಣಕ್ಕೆ ಯಾರು ಬೇಕಾದರೂ ದೇಣಿಗೆ ನೀಡಬಹುದು

ಸೋಮವಾರ, 27 ಜುಲೈ 2020 (09:37 IST)
ನವದೆಹಲಿ: ಅಯೋಧ್ಯೆಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಮಮಂದಿರ ನಿರ್ಮಾಣದ ಮುಂದಾಳತ್ವ ವಹಿಸಿರುವ ರಾಮ ಜನ್ಮಭೂಮಿ ಟ್ರಸ್ಟ್ ಮಂದಿರ ನಿರ್ಮಾಣಕ್ಕೆ ಯಾರು ಬೇಕಾದರೂ ದೇಣಿಗೆ ನೀಡಬಹುದು ಎಂದಿದೆ.

 

ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಯಾರು ಬೇಕಾದರೂ, ಯಾವ ಧರ್ಮದವರು ಬೇಕಾದರೂ ದೇಣಿಗೆ ನೀಡಬಹುದು. ಅದನ್ನು ಸ್ವೀಕರಿಸಲಾಗುತ್ತದೆ ಎಂದಿದೆ.

ಒಂದು ಮನೆಯಿಂದ ಕನಿಷ್ಠ 100 ರೂ.ಯಂತಾದರೂ ದೇಣಿಗೆ ಸಂಗ್ರಹಿಸುವ ಯೋಜನೆ ಟ್ರಸ್ಟ್ ಗಿದೆ ಎನ್ನಲಾಗಿದೆ. ರಾಮನ ಮೇಲೆ ನಂಬಿಕೆಯಿರುವ ಯಾರೇ ದೇಣಿಗೆ ನೀಡಿದರೂ ಅದನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಬಳಸುವ ಉದ್ದೇಶ ಹೊಂದಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ