ಪ್ರಧಾನಿ ನರೇಂದ್ರ ಮೋದಿ ಕೈಗೆ ಅಂಜನಾದ್ರಿ ಬೆಟ್ಟದ ಶಿಲೆ

ಶನಿವಾರ, 25 ಜುಲೈ 2020 (17:08 IST)
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯುತ್ತಿದ್ದರೆ ಇತ್ತ ಹನುಮಂತ ಉದಯಿಸಿದ ತಾಣ ಎಂದೇ ಖ್ಯಾತವಾಗಿರುವ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿದೆ.

ರಾಜ್ಯದ ಕೊಪ್ಪಳದ ಅಂಜನಾದ್ರಿ ಬೆಟ್ಟದ ಶಿಲೆ, ಚಕ್ರತೀರ್ಥದ ಜಲ ಹಾಗೂ ಮೃತ್ತಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಲಾಗುತ್ತದೆ ಎಂದು ಶ್ರೀರಾಮ ಸೇನೆಯ ರಾಜ್ಯಾ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.

ದೇಶದ ಮೂಲೆ, ಮೂಲೆಗಳಿಂದ ಪವಿತ್ರ ನದಿಗಳ ಜಲ, ಪವಿತ್ರ ಕ್ಷೇತ್ರಗಳ ಮೃತ್ತಿಕೆ (ಮಣ್ಣು) ಹಾಗೂ ಶಿಲೆಗಳನ್ನು ಅಯೋಧ್ಯೆಗೆ ಕಳಿಸಲಾಗುತ್ತಿದೆ. ಅದರಂತೆ  ರಾಮನ ಪರಮಭಕ್ತ ಹನುಮನ ಜನ್ಮ ಸ್ಥಾನ ಅಂಜನಾದ್ರಿ ಬೆಟ್ಟದಿಂದ 9 ಇಂಚು ಉದ್ದದ, 6 ಇಂಚು ಅಗಲದ ಹಾಗೂ 3 ಇಂಚು ದಪ್ಪದ ಶಿಲೆಗೆ ಬೆಳ್ಳಿಲೇಪನ ಮಾಡಿ, ಜುಲೈ 29ರಂದು ಬೆಳಗ್ಗೆ 6 ಗಂಟೆಗೆ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಅಲ್ಲಿಂದ ಹೊಸಪೇಟೆಯಲ್ಲಿ ಭಕ್ತರಿಗೆ ದರ್ಶನ ಮಾಡಿಸಿ ಆರು ಜನ ಪ್ರಮುಖರು ಬೆಳ್ಳಿಲೇಪನದ ಶಿಲೆ, ಮೃತ್ತಿಕೆ ಹಾಗೂ ಜಲವನ್ನು ಅಯೋಧ್ಯೆಗೆ ಕೊಂಡೊಯ್ಯಲಾಗುತ್ತದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ