ವಿಸ್ಕಿ ಕುಡಿಸಿ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕಾಮುಕರು ಅರೆಸ್ಟ್

ಭಾನುವಾರ, 1 ಡಿಸೆಂಬರ್ 2019 (06:44 IST)
ಹೈದರಾಬಾದ್ : ತೆಲಂಗಾಣದಲ್ಲಿ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪಶುವೈದ್ಯೆಯ ಮೃತದೇಹ ಸಿಕ್ಕಿದ್ದು, ಆಕೆಗೆ ವಿಸ್ಕಿ ಕುಡಿಸಿ ನಾಲ್ವರು ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿದ ವಿಚಾರ ಇದೀಗ ತನಿಖೆಯಿಂದ ಬಹಿರಂಗಗೊಂಡಿದೆ.



ಪಶು ವೈದ್ಯ ಪ್ರಿಯಾಂಕ ರೆಡ್ಡಿ (26)ಕೊಲೆಯಾದ ಮಹಿಳೆ. ಈಕೆಯ ಗಾಡಿಗೆ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಹಾಗೂ ಮೂವರು ಕ್ಲೀನರ್ ಗಳು ಕಿಡ್ನಾಪ್ ಮಾಡಿ ಆಕೆಗೆ ಬಲವಂತವಾಗಿ ವಿಸ್ಕಿ ಕುಡಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆ ವೇಳೆ ಅವರು ವೈದ್ಯೆಯ ಮೂಗು ಮತ್ತು ಬಾಯಿಯನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದರಿಂದ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.


ಆಗ ಈ ನಾಲ್ವರು ಆಕೆಯ ದೇಹವನ್ನು ತೆಗೆದುಕೊಂಡು ಹೋಗಿ ಸೇತುವೆ ಕೆಳಗೆ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನಾಲ್ವರು ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದು ಸತ್ಯಾಂಶ ಬಾಯ್ಬಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ