ಮೋದಿ ವಿರುದ್ಧ ಶೌರಿ ಹೇಳಿಕೆ ವೈಯಕ್ತಿಕ: ಸಚಿವ ಜೇಟ್ಲಿ

ಗುರುವಾರ, 26 ಮೇ 2016 (14:08 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ  ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಮಾಡಿರುವ ಟೀಕೆಗಳು ವೈಯಕ್ತಿಕ ಕಾರಣಗಳಾಗಿವೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
 
ಪ್ರಧಾನಿ ಮೋದಿ ಸರಕಾರದ ವೈಫಲ್ಯಗಳ ಬಗ್ಗೆ ಗಮನಹರಿಸದೆ ಅಧ್ಯಕ್ಷೀಯ ಸರಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಶೌರಿ ಆರೋಪಿಸಿದ್ದರು.
 
ಕಳೆದ ಎರಡು ವರ್ಷಗಳಿಂದ ಆರೋಪಗಳನ್ನು ಮಾಡದ ಶೌರಿ, ಇದೀಗ, ತಮ್ಮ ಗುರಿ ಈಡೇರದ ಹಿನ್ನೆಲೆಯಲ್ಲಿ ಅತೃಪ್ತಿಯಿಂದಾಗಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ, ಇಂತಹ ಹೇಳಿಕೆಗಳಿಗೆ ಮಹತ್ವ ಕೊಡುವುದು ಸರಿಯಲ್ಲ ಎಂದು ಸಚಿವ ಜೇಟ್ಲಿ ತಿರುಗೇಟು ನೀಡಿದ್ದಾರೆ.
 
ಬಿಜೆಪಿ ನಾಯಕರಾದ ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥ್ ಮತ್ತು ಸಾದ್ವಿ ನಿರಂಜನ ಜ್ಯೋತಿ ಹೇಳಿಕೆಗಳನ್ನು ಮೋದಿ ಸರಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ಹೈಕಮಾಂಡ್ ಮನಬಂದಂತೆ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ನಾಯಕರಿಗೆ ತಾಕೀತು ಮಾಡಿದೆ. ಒಂದು ವೇಳೆ ಹೈಕಮಾಂಡ್ ಆದೇಶ ಮೀರಿ ಹೇಳಿಕೆ ನೀಡಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ