ಪಕ್ಷದಿಂದಲೇ ವಜಾಗೊಂಡ ಅರುಣಾಚಲ ಪ್ರದೇಶ್ ಮುಖ್ಯಮಂತ್ರಿ

ಶುಕ್ರವಾರ, 30 ಡಿಸೆಂಬರ್ 2016 (12:46 IST)
ಪಕ್ಷ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಸೇರಿದಂತೆ 7 ಮಂದಿ ಶಾಸಕರನ್ನು ಪಿಪಿಎ ( ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಪ್ರದೇಶ್) ಪಕ್ಷದಿಂದ ಗುರುವಾರ ಸಂಜೆ ಅಮಾನತುಗೊಳಿಸಲಾಗಿದೆ. 

ಕಾಂಗ್ರೆಸ್ ಪಕ್ಷದಿಂದ ಬಂಡಾವೆದ್ದಿದ್ದ ಪೇಮಾ ಮತ್ತು ಇತರ 42 ಶಾಸಕರು ಸೆಪ್ಟೆಂಬರ್ ಮಧ್ಯದಲ್ಲಿ ಪಿಪಿಎ ಪಕ್ಷವನ್ನು ಆಲಂಗಿಸಿಕೊಂಡಿದ್ದರು. 
 
ಪಿಪಿಎ ಅಧ್ಯಕ್ಷ ಖಫಾ ಬೆಂಗಿಯಾ ಆದೇಶದಂತೆ ಪಕ್ಷ ಪೇಮಾ ಖಂಡು ಶಾಸಕಾಂಗ ಪಕ್ಷದ ನಾಯಕನಲ್ಲ, ಈ ಸ್ಥಾನಕ್ಕಿರುವ ಯಾವುದೇ ಅಧಿಕಾರವನ್ನು ಅವರು ನಡೆಸುವ ಹಾಗಿಲ್ಲ ಎಂದು ಪಕ್ಷ ಘೋಷಿಸಿದ್ದು, ಅವರು ನಡೆಸುವ ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳದಂತೆ ಆದೇಶ ನೀಡಿದೆ. 
 
ಅಮಾನತುಗೊಂಡವರಲ್ಲಿ ಉಪಮುಖ್ಯಮಂತ್ರಿ ಚೌನ ಮೈನ್ ಕೂಡ ಸೇರಿದ್ದು, ಅರುಣಾಚಲದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ತಲೆದೋರಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ