ದೆಹಲಿ ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಪಕ್ರರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕೇಜ್ರಿವಾಲ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಇತ್ತೀಚೆಗೆ ಲೋಕಸಭೆ ಚುನಾವಣೆ ದೃಷ್ಟಿಯಿಂದ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ನಾಳೆ ಮಧ್ಯಂತರ ಜಾಮೀನಿನ ಅವಧಿ ಮುಕ್ತಾಯಗೊಳ್ಳಲಿದ್ದು ಕೇಜ್ರಿವಾಲ್ ಮತ್ತೆ ಜೈಲಿಗೆ ಶರಣಾಗಬೇಕಿದೆ.
ಇದೀಗ ಜಾಮೀನು ನಿರಾಕರಣೆ ಬೆನ್ನಲ್ಲೇ ದೆಹಲಿ ಜನರನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ. ನನಗೆ ಗಂಭೀರ ಕಾಯಿಲೆ ಬಂದಂತಿದೆ. ಇದಕ್ಕಾಗಿ ನಾನು ಸಾಕಷ್ಟು ವೈದ್ಯಕೀಯ ಪರೀಕ್ಷೆಗೊಳಪಡಬೇಕಿದೆ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ನಾನು ಡೆಲ್ಲಿಯ ಬಗ್ಗೆ ಯೋಚನೆ ಮಾಡುತ್ತಿರುತ್ತೇನೆ. ನಾನು ಜೈಲಿಗೆ ಹೋದ ಮೇಲೆ ದೆಹಲಿ ಮತ್ತು ನನ್ನ ಆಮ್ ಆದ್ಮಿ ಪಕ್ಷವನ್ನು ನೀವೇ ನೋಡಿಕೊಳ್ಳಬೇಕು ಎಂದು ಜನತೆಗೆ ಸಂದೇಶ ನೀಡಿದ್ದಾರೆ.