ಗರ್ಭನಿರೋಧಕ ಸಾಧನ ಹೆಚ್ಚು ಬಳಸುವವರು ಮುಸ್ಲಿಮರು: ಅಸಾದುದ್ದೀನ್ ಓವೈಸಿ

Krishnaveni K

ಸೋಮವಾರ, 29 ಏಪ್ರಿಲ್ 2024 (13:35 IST)
Photo Courtesy: X
ಹೈದರಾಬಾದ್: ದೇಶದಲ್ಲಿ ಹೆಚ್ಚು ಗರ್ಭನಿರೋಧಕ ಸಾಧನವನ್ನು ಬಳಸುತ್ತಿರುವವರು ಮುಸ್ಲಿಮರೇ ಆಗಿದ್ದಾರೆ. ಹೀಗಾಗಿ ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಮುಸ್ಲಿಮರನ್ನು ಹೆಚ್ಚು ಮಕ್ಕಳು ಹೆರುವವರು ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಟಾಂಗ್ ಕೊಟ್ಟಿದ್ದಕ್ಕೆ ಅಸಾದುದ್ದೀನ್ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಹೆಚ್ಚು ಕಾಂಡೋಮ್ ಬಳಸುವವರು ಮುಸ್ಲಿಮರು. ಇದನ್ನು ಸರ್ಕಾರೀ ಅಂಕಿ ಅಂಶಗಳೇ ಹೇಳುತ್ತಿವೆ. ಇದರಿಂದಾಗಿಯೇ ಮುಸ್ಲಿಮರಲ್ಲಿ ಫಲವತ್ತತೆ ಕಡಿಮೆಯಾಗುತ್ತಿದೆ ಎಂದಿದ್ದಾರೆ.

ಮೋದಿ ವಿನಾಕಾರಣ ಇಂತಹ ಹೇಳಿಕೆಗಳನ್ನು ನೀಡಿ ಹಿಂದೂ-ಮುಸ್ಲಿಮರ ನಡುವೆ ಧ್ವೇಷ ಹರಡಲು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ ಎಂದು ಬಿಜೆಪಿ ಮತ್ತು ಆರ್ ಎಸ್ಎಸ್ ಗೆ ಭಯ ಎಂದು ಓವೈಸಿ ಹೇಳಿದ್ದಾರೆ.

ಮುಸ್ಲಿಮರನ್ನು ಒಳನುಸುಳುಕೋರರು ಎಂದು ಕರೆಯುವ ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಜನರನ್ನು ವಂಚಿಸುತ್ತಿದ್ದಾರೆ ಎಂದು ಓವೈಸಿ ಆರೋಪಿಸಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ರಾಲಿಯೊಂದರಲ್ಲಿ ಪ್ರಧಾನಿ ಮೋದಿ ಮುಸ್ಲಿಮರನ್ನು ಹೆಚ್ಚು ಮಕ್ಕಳನ್ನು ಹಡೆಯುವವರು ಎಂದು ಲೇವಡಿ ಮಾಡಿದ್ದರು. ಅದನ್ನು ಉಲ್ಲೇಖಿಸಿ ಓವೈಸಿ ಇಂದು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ