ಬಿಜೆಪಿ, ಆರೆಸ್ಸೆಸ್ ಪ್ರೇರಣಿಯಿಂದ ನಮ್ಮ ಮೇಲೆ ದಾಳಿ: ರಾಹುಲ್ ಗಾಂಧಿ

ಶನಿವಾರ, 5 ಆಗಸ್ಟ್ 2017 (15:45 IST)
ಗುಜರಾತ್‌ನಲ್ಲಿ ಬೆಂಗಾವಲು ಕಾರಿನ ಮೇಲೆ ನಡೆದ ದಾಳಿ ಆರೆಸ್ಸೆಸ್, ಬಿಜೆಪಿ ಪ್ರೇರಿತವಾಗಿದೆ. ಆದರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
 
ಪ್ರವಾಹ ಪೀಡಿತ ಗುಜರಾತ್‌ನ ಬನಸ್ಕಂದ ಜಿಲ್ಲೆಗೆ ರಾಹುಲ್ ಗಾಂಧಿ ಭೇಟಿ ನೀಡಿ ವಾಪಸ್ ಮರಳುತ್ತಿರುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ ಕಪ್ಪು ಧ್ವಜಗಳನ್ನು ತೋರಿಸಿದ್ದರು. 
 
ನಮ್ಮ ಕಾರುಗಳ ಮೇಲೆ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರು ನಡೆಸಿದ ಕಲ್ಲು ತೂರಾಟ ಪ್ರಧಾನಿ ಮೋದಿಯ ರಾಜಕೀಯ ತೋರಿಸುತ್ತದೆ. ಮೋದಿಯ ಬೆಂಬಲಿಗರೇ ಇಂತಹ ಕೃತ್ಯದಲ್ಲಿ ತೊಡಗಿದ್ದರಿಂದ ಅವರು ಘಟನೆಯನ್ನು ಖಂಡಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.  
 
ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಘಟನೆಯನ್ನು ತೀವ್ರವಾಗಿ ಖಂಡಿಸಿ, ಇದೊಂದು ರಾಹುಲ್ ಗಾಂಧಿ ಹತ್ಯೆಗೆ ನಡೆಸಿದ ಪೂರ್ವ ನಿಯೋಜಿತ ಸಂಚು ಎಂದು ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ