ಅಯೋಧ್ಯೆ ರಾಮಮಂದಿರ ರಾಮಲಲ್ಲಾ ದರ್ಶನ ಸಮಯ, ಎಂಟ್ರಿ ಟಿಕೆಟ್ ಸಿಗೋದು ಎಲ್ಲಿ?
ಬೆಳಿಗ್ಗೆ 3 ಗಂಟೆಯಿಂದಲೇ ಜನ ಸರತಿಯಲ್ಲಿ ನಿಂತಿದ್ದರು. ರಾಮಮಂದಿರವನ್ನು ಒಮ್ಮೆ ಕಣ್ತುಂಬಿಕೊಳ್ಳುವ ಆಸೆ ಎಲ್ಲರಲ್ಲಿದೆ. ಹೀಗಾಗಿ ಜನರು ಅಯೋಧ್ಯೆಗೆ ತೆರಳುವ ಮಾರ್ಗ ಯಾವುದು ಎಂದು ಹುಡುಕಾಡುತ್ತಿದ್ದಾರೆ.
ಅಯೋಧ್ಯೆಯಲ್ಲಿ ದೇವರ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ. ಬೆಳಿಗ್ಗೆ 7 ರಿಂದ 11.30 ರ ವರೆಗೆ ಮತ್ತು ಅಪರಾಹ್ನ 2 ಗಂಟೆಯಿಂದ ಸಂಜೆ 7 ರವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 6.30 ಕ್ಕೆ ಶೃಂಗಾರ ಆರತಿ ಸಂಜೆ 7.30 ಕ್ಕೆ ಸಂಧ್ಯಾ ಆರತಿ ನಡೆಯಲಿದೆ.
ಅಯೋಧ್ಯೆಯಲ್ಲಿ ರಾಮಂದಿರ ಆರತಿ ವೀಕ್ಷಣೆಯ ಉಚಿತ ಪಾಸ್ ಗಳನ್ನು ಆಫ್ ಲೈನ್ ಮತ್ತು ಆನ್ ಲೈನ್ ನಲ್ಲಿ ಪಡೆದುಕೊಳ್ಳಬಹುದು. ರಾಮ ಜನ್ಮಭೂಮಿ ಟ್ರಸ್ಟ್ ಅಥವಾ ಶ್ರೀರಾಮ ಜನ್ಮಭೂಮಿಯಲ್ಲಿರುವ ಶಿಬಿರ ಕಚೇರಿಯಿಂದ ಪಾಸ್ ಪಡೆದುಕೊಳ್ಳಬಹುದು. ಪಾಸ್ ಪಡೆಯಲು ಐಡಿ ಪ್ರೂಫ್ ಕೊಡಬೇಕಾಗುತ್ತದೆ.