ಆಯುರ್ವೇದ : ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ ಕೌಶಲ್ ಕಿಶೋರ್

ಮಂಗಳವಾರ, 7 ಮಾರ್ಚ್ 2023 (10:15 IST)
ನವದೆಹಲಿ : ಆಯುರ್ವೇದ ಆಹಾರ ಪಥ್ಯದಿಂದಾಗಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರು 22 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
 
ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ತೂಕ ಕಡಿಮೆ ಮಾಡಿಕೊಂಡಿರುವ ವಿಷಯವನ್ನು ಖುದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಟ್ವೀಟ್ನಲ್ಲಿ ಏನಿದೆ?

ಸಚಿವರು ತಮ್ಮ ಮೊದಲ ಹಾಗೂ ನಂತರದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ತೂಕ ಇಳಿಸಲು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಪ್ರವೇಶ ಪಡೆದೆ.

ಅದಾದ ಬಳಿಕ ಸಂಸ್ಥೆಯ ಸೂಚಿಸಿದ ಆಹಾರ ಕ್ರಮವನ್ನು ಅನುಸರಿಸಲು ಪ್ರಾರಂಭಿಸಿದೆ. ಇದರಿಂದಾಗಿ 2021ರ ಮೊದಲು 96 ಕೆಜಿ ಇದ್ದ ನಾನು, ಈಗ 22 ಕೆಜಿ ಕಳೆದುಕೊಂಡು 74 ತೂಕ ಹೊಂದಿದ್ದೇನೆ. ನಾನು ಮೊದಲಿಗಿಂತ ಫಿಟ್ ಆಗಿದ್ದೇನೆ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ