ಟಾಯ್ಲೆಟ್ ಕ್ಲೀನರ್ ಇರುವ ಸಾಫ್ಟ್ ಡ್ರಿಂಕ್ ಹಣ ಮಸೀದಿ, ಮದರಸಾಗೆ ಹೋಗುತ್ತೆ: ಬಾಬಾ ರಾಮ್ ದೇವ್ ಬಾಂಬ್

Krishnaveni K

ಗುರುವಾರ, 10 ಏಪ್ರಿಲ್ 2025 (11:09 IST)
ನವದೆಹಲಿ: ಈ ಬೇಸಿಗೆಕಾಲದಲ್ಲಿ ಎಲ್ಲರೂ ಕೂಲ್ ಆಗಿ ಚಪ್ಪರಿಸಿಕೊಂಡು ಸೇವನೆ ಮಾಡುವ ಸಾಫ್ಟ್ ಡ್ರಿಂಕ್ ಗಳನ್ನು ಟಾಯ್ಲೆಟ್ ಕ್ಲೀನರ್ ಬಳಸಿ ತಯಾರಿಸಲಾಗುತ್ತದೆ ಎಂದು ಪತಂಜಲಿ ಉತ್ಪನ್ನದ ಸಂಸ್ಥಾಪಕ ಬಾಬಾ ರಾಮ್ ದೇವ್ ಆರೋಪಿಸಿದ್ದಾರೆ.

ಸಾಫ್ಟ್ ಡ್ರಿಂಕ್ ಗಳು ತುಂಬಾ ಅಪಾಯಕಾರಿ. ಅವುಗಳಲ್ಲಿ ಟಾಯ್ಲೆಟ್ ಕ್ಲೀನರ್ ಬಳಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಶರಬತ್ ಜಿಹಾದ್ ಎಂದು ಬಾಬಾ ರಾಮ್ ದೇವ್ ಹೇಳಿರುವುದು ಈಗ ತೀವ್ರ ಚರ್ಚೆಗೆ ಗುರಿಯಾಗಿದೆ.

ಪತಂಜಲಿಯ ರೋಸ್ ಶರಬತ್ ಉತ್ಪನ್ನದ ಪ್ರಚಾರದ ವಿಡಿಯೋವೊಂದರಲ್ಲಿ ಬಾಬಾ ರಾಮ್ ದೇವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾಫ್ಟ್ ಡ್ರಿಂಕ್ ಹೆಸರಿನಲ್ಲಿ ಮಾರಾಟ ಮಾಡುವ ಪಾನೀಯಗಳಿಗೆ ಟಾಯ್ಲೆಟ್ ಕ್ಲೀನರ್ ಬಳಸುತ್ತಾರೆ.

ಇಂತಹ ಸಾಫ್ಟ್ ಡ್ರಿಂಕ್ ಗಳಿಂದ ಸಂಗ್ರಹಿಸಿದ ಹಣವನ್ನು ಮಸೀದಿ, ಮದ್ರಾಸಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದೊಂದು ರೀತಿಯಲ್ಲಿ ಶರಬತ್ ಜಿಹಾದ್ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. ಅವರ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಬೇಸಿಗೆಯ ಬೇಗೆ ತಣಿಸಲು ಜನರು ಸಾಫ್ಟ್ ಡ್ರಿಂಕ್ ಗಳನ್ನು ಸೇವನೆ ಮಾಡುತ್ತಾರೆ. ಆದರೆ ಈ ಸಾಫ್ಟ್ ಡ್ರಿಂಕ್ ಗಳಲ್ಲಿರುವುದು ಟಾಯ್ಲೆಟ್ ಕ್ಲೀನರ್. ಇದೊಂದು ರೀತಿಯಲ್ಲಿ ವಿಷವಿದ್ದಂತೆ. ಒಂದು ಶರಬತ್ ಕಂಪನಿಯಂತೂ ಇದನ್ನು ಮಾರಿ ಬಂದ ಹಣದಲ್ಲಿ ಮದರಸಾ, ಮಸೀದಿ ನಿರ್ಮಾಣ ಮಾಡುತ್ತಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ