ರಮ್ಮಿ ಆಡುವವರಿಗೆ, ರಮ್ಮಿ ಪ್ರಿಯರಿಗೆ ಬ್ಯಾಡ್ ನ್ಯೂಸ್ ಇದಾಗಿದೆ.
ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ ಅವರು ಆನ್ ಲೈನ್ ರಮ್ಮಿ ಗೇಮ್ ನಿಷೇಧ ಮಾಡುವಂತೆ ತೀವ್ರ ಒತ್ತಾಯ ಮಾಡಿದ್ದಾರೆ.
ಆನ್ ಲೈನ್ ರಮ್ಮಿ ಗೇಮ್ ಗಳಿಗೆ ಕ್ರಿಕೆಟಿಗರು, ಸಿನಿಮಾ ನಟ, ನಟಿಯರು ಜಾಹಿರಾತು ನೀಡುತ್ತಿದ್ದು, ಯುವಜನತೆ ಆನ್ ಲೈನ್ ನಲ್ಲಿಯೇ ರಮ್ಮಿ ದಾಸರಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಬಹುತೇಕ ಯುವಜನತೆ ಆನ್ ಲೈನ್ ರಮ್ಮಿ ಗೀಳಿಗೆ ಬಿದ್ದು ಹಣ ಕಳೆದುಕೊಂಡು ಬೇರೆ ಬೇರೆ ಚಟಗಳನ್ನು ಮಾಡುತ್ತಾ ದಾರಿ ತಪ್ಪುತ್ತಿದ್ದು, ಇದನ್ನು ನಿಷೇಧಿಸುವಂತೆ ಅವರು ಹೇಳಿದ್ದಾರೆ.