ದೇಶದಲ್ಲಿರುವ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್‌ನಿಂದ ನೋವು ಅನುಭವಿಸುತ್ತಿದ್ದಾರೆ. ಸ್ಥಳೀಯ ನ್ಯಾಯಾಲಯಗಳು ಮತ್ತು ಪೊಲೀಸ್ ಅಧಿಕಾರಿಗಳು ಕೂಡಾ ಸಹಾಯ ಹಸ್ತ ಒದಗಿಸುತ್ತಿಲ್ಲ. ಅನಕ್ಷರತೆ, ಪುರುಷರ ದಬ್ಬಾಳಿಕೆ ಮುಸ್ಲಿಂ ಮಹಿಳೆಯರ ಜೀವನಕ್ಕೆ ಸಂಕಷ್ಟ ತಂದಿರುವುದರಿಂದ ಮೋದಿ ಸರಕಾರ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.
ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಮಾಜಿ ಸಿಎಂ ಮಾಯಾವತಿ ಅಪರಾಧಿ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ಸೋಲನುಭವಿಸಿದ್ದಾರೆ. ಬಿಜೆಪಿ ಮುಸ್ಲಿಮರಿಗೆ ವಿರುದ್ಧವಾಗಿಲ್ಲ ಎನ್ನುವುದು ಖಚಿತವಾಗಿದ್ದರಿಂದ, ಉತ್ತರಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪುರುಷರು, ಮಹಿಳೆಯರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಕಾಶ್ಮೇರೆ ಗೇಟ್ ನಿವಾಸಿ ಮಹಿಳಾ ವಕೀಲೆ ಶೆಹನಾಜ್ ಅಫ್ಜಲ್ ತಿಳಿಸಿದ್ದಾರೆ.
ಮತ್ತೊಬ್ಬ ಮುಸ್ಲಿಂ ಮಹಿಳೆ ವಕೀಲೆ ರೆಹಮಾನಿ ಮಾತನಾಡಿ, ತ್ರಿವಳಿ ತಲಾಕ್ ನಮ್ಮ ಸಮುದಾಯಕ್ಕೆ ಕಪ್ಪು ಚುಕ್ಕೆಯಾಗಿದೆ. ಅವಳು ತುಂಬಾ ಕುಳ್ಳಗಿದ್ದಾಳೆ, ಅವಳು ಸುಂದರಿಯಲ್ಲ , ಅವಳಿಗೆ ಅಡುಗೆ ಮಾಡಲು ಬರುವುದಿಲ್ಲ ಎನ್ನುವಂತಹ ಕ್ಷುಲ್ಲಕ ಕಾರಣಗಳನ್ನು ನೀಡಿ ವಿಚ್ಚೇದನ ನೀಡಲಾಗುತ್ತಿದೆ. ಇಷ್ಟಪಟ್ಟು ಮದುವೆಯಾದ ನಂತರ ಇಂತಹ ಕ್ಷುಲ್ಲಕ ಕಾರಣಗಳನ್ನು ನೀಡಿ ವಿಚ್ಚೇದನ ನೀಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.