ಡಿ.ಕೆ. ಶಿವಕುಮಾರ್: ದೇಶದ ಎರಡನೆಯ ಶ್ರೀಮಂತ ಸಚಿವ

ಶನಿವಾರ, 6 ಆಗಸ್ಟ್ 2016 (10:25 IST)
ರಾಜ್ಯಗಳಲ್ಲಿನ ಶ್ರೀಮಂತ ಸಚಿವರಲ್ಲಿ ಕರ್ನಾಟಕದ  ಇಂಧನ ಸಚಿವ ಡಿ.ಕೆ. ಶಿವಕುಮಾರ  ಎರಡನೆಯ ಸ್ಥಾನ ಪಡೆದಿದ್ದಾರೆ. ದೇಶದಲ್ಲಿ ಶೇ,97 ರಷ್ಟು ಸಚಿವರು ಕೋಟ್ಯಾದಿಪತಿಗಳಾಗಿದ್ದಾರೆ.

ಆಂಧ್ರಪ್ರದೇಶದ  ತೆಲುಗು ದೇಶಂ ಪಕ್ಷದ ಸಚಿವ ಪೊಂಗುರು  ನಾರಾಯಣ ದೇಶದ ಅತ್ಯಂತ ಶ್ರೀಮಂತ ಸಚಿವರೆನಿಸಿಕೊಂಡಿದ್ದು, ಅವರ ಆಸ್ತಿ ಮೌಲ್ಯ 496 ಕೋಟಿಯಾಗಿದ್ದರೆ, ಡಿಕೆಶಿ 251 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ಮೌಲ್ಯದ ಮಾಹಿತಿಯನ್ನು ಆಧರಿಸಿ, 29 ವಿಧಾನಸಭೆ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಸಚಿವರನ್ನು ಅಧ್ಯಯನ ನಡೆಸಿ ಈ ವರದಿ ತಯಾರಿಸಲಾಗಿದೆ. ಅವರ  ಪೈಕಿ 462 (ಶೇ.76) ಮಂದಿ ಕೋಟ್ಯಧಿಪತಿಗಳು ಎಂದು ದೆಹಲಿ ಮೂಲದ ಎಡಿಆರ್ ಈ ವರದಿಯನ್ನು ನೀಡಿದೆ.

ಅರುಣಾಚಲ ಪ್ರದೇಶ, ಪಂಜಾಬ್, ಪಾಂಡಿಚೇರಿಗಳಲ್ಲಿ 100% ಸಚಿವರು ಕೋಟ್ಯಾಧಿಪತಿಗಳೆನಿಕೊಂಡಿದ್ದರೆ, ಕರ್ನಾಟಕದಲ್ಲಿ ಈ ಸಂಖ್ಯೆ 97%ರಷ್ಟಿದೆ.

ಶೇ.34 ರಷ್ಟು ಸಚಿವರು ಅಪರಾಧ ಹಿನ್ನೆಲೆಯವರಾಗಿದ್ದು ಜಾರ್ಖಂಡ್ ರಾಜ್ಯದ 9 ಮಂದಿ ಸಚಿವರ ಮೇಲೆ ಗಂಭೀರವಾದ ಆರೋಪಗಳಿವೆ. ಆದರೆ ಕರ್ನಾಟಕದ ಯಾವೊಬ್ಬ ಸಚಿವ ಮೇಲೂ ಗಂಭೀರವಾದ ಆರೋಪಗಳಿಲ್ಲ.

ವೆಬ್ದುನಿಯಾವನ್ನು ಓದಿ