ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಸಂಕಷ್ಟ

ಸೋಮವಾರ, 8 ಮೇ 2017 (12:01 IST)
ನವದೆಹಲಿ: ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಮತ್ತೆ ಮೇವು ಹಗರಣದ ಉರುಳು ಸುತ್ತಿಕೊಂಡಿದೆ. ಅವರ ವಿರುದ್ಧ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ.

 
900 ಕೋಟಿ ರೂ. ಮೇವು ಹಗರದಲ್ಲಿ ಆರೋಪಿಯಾಗಿರುವ ಲಾಲೂ ವಿರುದ್ಧ ಪ್ರತ್ಯೇಕ ವಿಚಾರಣೆ ಕೈ ಬಿಡುವಂತೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ, ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಬೇಕು. ಇದನ್ನು 9 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಲಾಲೂ ಜತೆಗೆ ಪ್ರಮುಖ ಆರೋಪಿಗಳಾದ ಜಗನ್ನಾಥ್ ಮಿಶ್ರಾ ಮತ್ತು ಇಬ್ಬರು ಅಧಿಕಾರಿಗಳನ್ನೂ ಸಿಬಿಐ ವಿಚಾರಣೆಗೊಳಪಡಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ