ಬಿಹಾರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆರ್‌ಜೆಡಿಯ ಲಾಲು ಕುಟುಂಬಕ್ಕೆ ಬಿಗ್‌ಶಾಕ್‌

Sampriya

ಸೋಮವಾರ, 13 ಅಕ್ಟೋಬರ್ 2025 (14:45 IST)
Photo Credit X
ನವದೆಹಲಿ: ಮುಂದಿನ ತಿಂಗಳು ಬಿಹಾರ ವಿಧಾನಸಭಾ ಚುನಾವಣೆ ಮತದಾನ ನಡೆಲಿದೆ. ಅದಕ್ಕೂ ಮುನ್ನ ಲಾಲೂಪ್ರಸಾದ್‌ ಯಾದವ್‌ ಕುಟುಂಬಕ್ಕೆ  ಬಿಗ್‌ಶಾಕ್‌ ಎದುರಾಗಿದೆ.

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಲಾಲೂ ಯಾದವ್, ಪತ್ನಿ, ಮಗನಿಗೆ ದೊಡ್ಡ ನ್ಯಾಯಾಲಯದ ಹಿನ್ನಡೆಯಾಗಿದ್ದು, ಭ್ರಷ್ಟಾಚಾರ ಆರೋಪದಡಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಅವರ ಮಗ, ಹಾಲಿ ವಿರೋಧ ಪಕ್ಷದ ನಾಯಕರಾದ ತೇಜಸ್ವಿ ಯಾದವ್ ವಿರುದ್ಧ ದೆಹಲಿ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ರಾಷ್ಟ್ರ ರಾಜಧಾನಿಯ ನ್ಯಾಯಾಲಯವೊಂದು ಆರ್ ಜೆಡಿಗೆ ಬಿಗ್ ಶಾಕ್ ನೀಡಿದೆ. ಚುನಾವಣೆಗೆ ಮುಂಚಿತವಾಗಿ ವಿಚಾರಣೆಗೆ ವೇದಿಕೆಯನ್ನು ಸಿದ್ಧಪಡಿಸುತ್ತಿದೆ.

ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ವಂಚನೆಯ ಸಾಮಾನ್ಯ ಆರೋಪಗಳನ್ನು ರೂಪಿಸಿದ್ದಾರೆ.

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಹೋಟೆಲ್‌ಗಳ ಕಾರ್ಯಾಚರಣೆಯ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡುವಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಲಾಲು ಪ್ರಸಾದ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯೂ ನ್ಯಾಯಾಲಯ ಆರೋಪ ಹೊರಿಸಿದೆ.

ಈ ಆರೋಪಗಳನ್ನು ಲಾಲೂ ಪ್ರಸಾದ್ ಯಾದವ್ ಕುಟುಂಬ ನಿರಾಕರಿಸಿದೆ. ಆದರೂ ವಿಪಕ್ಷಗಳು ಇದನ್ನು ಅಸ್ತ್ರಗಳಾಗಿ ಚುನಾವಣಾ ಪ್ರಚಾರದಲ್ಲಿ ಬಳಸುವ ಸಾಧ್ಯತೆ ಇದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ