ಹಾಸನಾಂಬೆ ಜೈಲಲ್ಲಿರುವ ಮಗನನ್ನು ಕಾಪಾಡು ಎಂದು ಪ್ರಜ್ವಲ್ ಗಾಗಿ ಬೇಡಿದ ಭವಾನಿ ರೇವಣ್ಣ

Krishnaveni K

ಸೋಮವಾರ, 13 ಅಕ್ಟೋಬರ್ 2025 (14:18 IST)
Photo Credit: Instagram
ಹಾಸನ: ಅತ್ಯಾಚಾರ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಪುತ್ರ ಪ್ರಜ್ವಲ್ ರೇವಣ್ಣಗಾಗಿ ಇಂದು ಭವಾನ ರೇವಣ್ಣ ಹಾಸನಾಂಬೆಯ ಮುಂದೆ ಪ್ರಾರ್ಥನೆ ಮಾಡಿದ್ದಾರೆ.
 

ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯದ ಉತ್ಸವ ಇದೀಗ ನಡೆಯುತ್ತಿದೆ. ಪ್ರತಿನಿತ್ಯವೂ ಲಕ್ಷಾಂತರ ಭಕ್ತುರ ಬಂದು ಹಾಸನಾಂಬೆಯ ದರ್ಶನ ಮಾಡಿ ಹೋಗುತ್ತಿದ್ದಾರೆ. ಇಂದು ಶಾಸಕ ಎಚ್ ಡಿ ರೇವಣ್ಣ ಮತ್ತು ಪತ್ನಿ ಭವಾನಿ ರೇವಣ್ಣ ಹಾಸನಾಂಬೆಯ ದರ್ಶನಕ್ಕೆ ಬಂದಿದ್ದಾರೆ.

ಹಾಸನ ರೇವಣ್ಣ ತವರು. ಹೀಗಾಗಿ ಜೈಲಿನಲ್ಲಿರುವ ತಮ್ಮ ಮಗನಿಗೆ ಒಳಿತಾಗಲು ಪೂಜೆ ಮಾಡಿಸಲು ದೇವಾಲಯಕ್ಕೆ ಬಂದಿದ್ದರು. ಮಗ ಪ್ರಜ್ವಲ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ಭವಾನಿ ರೇವಣ್ಣ ದೇವಿಯ ಮುಂದೆ ಮಗನ ಕಷ್ಟ ಪರಿಹಾರ ಮಾಡುವಂತೆ ಬೇಡಿಕೊಂಡಿದ್ದಾರೆ.

ಮನೆಗೆಲಸದಾಕೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರ ಹೊರತಾಗಿ ಬೇರೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಚಾರಣೆಯ ಹಂತದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ