ಬಿಹಾರ ಚುನಾವಣೆ: ಕೈತಪ್ಪಿದ ಟಿಕೆಟ್‌, ಬಟ್ಟೆ ಹರಿದುಕೊಂಡು ಹೋರಳಾಡಿದ ಆರ್‌ಜೆಡಿ ನಾಯಕ

Sampriya

ಭಾನುವಾರ, 19 ಅಕ್ಟೋಬರ್ 2025 (17:39 IST)
Photo Credit X
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷದಿಂದ ಟಿಕೆಟ್ ಕೈತಪ್ಪಿದ್ದರಿಂದ ನಾಯಕ ಮದನ್ ಪ್ರಸಾದ್ ಶಾ ಅವರು ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಮನೆ ಎದುರು ಕುರ್ತಾವನ್ನು ಹರಿದು ಹಾಕಿ, ರಸ್ತೆಯಲ್ಲಿ ಹೊರಳಾಡಿದ್ದಾರೆ. 

ದೀರ್ಘಕಾಲದಲ್ಲಿ ಆರ್‌ಜೆಡಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದಮದನ್ ಸಾಹ್ ಅವರು ಈ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದರು.  2020 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಡಿಮೆ ಅಂತರದಲ್ಲಿ ಪರಾಜಿತರಾಗಿದ್ದ ಮದನ್ ಸಾಹ್, ಮಧುಬಾನ್ ಕ್ಷೇತ್ರದಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿ ಟಿಕೆಟ್ ಸಿಗದೆ ತುಂಬಾ ಹತಾಶೆಗೊಳಗಾಗಿದ್ದಾರೆ.

ನನಗೆ ರೂ. 2.7 ಕೋಟಿ ಕೇಳಲಾಯಿತು. ನನ್ನ ಮಕ್ಕಳ ಮದುವೆಯನ್ನು ತಡೆಹಿಡಿಯುವ ಅಷ್ಟು ಹಣವನ್ನು ಹೇಗೊ ಕೊಟ್ಟಿದೆ. ಈಗ ನನ್ನ ಕಥೆ ಮುಗಿಸಲಾಗಿದೆ. ಕನಿಷ್ಠ ಪಕ್ಷ ನನ್ನ ಹಣವನ್ನಾದರೂ ವಾಪಸ್ ಮಾಡಲಿ ಎಂದು ಅವರು ಕಣ್ಣೀರು ಹಾಕಿದ್ದಾರೆ.

ಮಾಜಿ ಸಿಎಂ ಪಾಟ್ನಾದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಕಾರನ್ನು ಷಾ ಹಿಂಬಾಲಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ