ಅಭಿಷೇಕ್ ಆಚಾರ್ಯ ಬದುಕಿನಲ್ಲಿ ಆಟವಾಡಿದ ನಿರೀಕ್ಷಾ ಕೊನೆಗೂ ಅರೆಸ್ಟ್‌

Sampriya

ಭಾನುವಾರ, 19 ಅಕ್ಟೋಬರ್ 2025 (17:20 IST)
Photo Credit X
ಉಡುಪಿ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಯುವಕ ಅಭಿಷೇಕ್ ಆಚಾರ್ಯ (25)  ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ನಿರೀಕ್ಷಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಈಚೆಗೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಕರ್ಮ ಯುವ ಮಿಲನ ಸಂಘಟನೆ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಮನವಿ ಮಾಡಿದ್ದರು. ಅದಲ್ಲದೆ ಅಭಿಷೇಕ್ ಸಾವಿಗೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕಮ ಜಾಲತಾಣದಲ್ಲೀ ಭಾರೀ ಕೂಗು ವ್ಯಕ್ತವಾಗಿತ್ತು. ಇದೀಗ ಓರ್ವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಹನಿಟ್ರ್ಯಾಪ್‌ಗೊಳಗಾಗಿ ಆತ್ಮಹತ್ಯೆಗೆ ಶರಣಾದ ಯುವಕನನ್ನು ಉಡುಪಿ ಕಾರ್ಕಳ ತಾಲೂಕಿನ ಬೆಳ್ಮಣ್‌ ಎಂಬಲ್ಲಿನ ಅಭಿಷೇಕ್ ಆಚಾರ್ಯ (25) ಎಂದು ಗುರುತಿಸಲಾಗಿದೆ. 

ಆತ ಸಾವಿಗೂ ಶರಣಾಗುವ ಮುನ್ನಾ ಡೆತ್ ನೋಟ್‌ನಲ್ಲಿ ಹನಿಟ್ರ್ಯಾಪ್‌ಗೊಳಗಾಗಿರುವ ಬಗ್ಗೆ ಹೇಳಿಕೊಂಡಿದ್ದು, ಆದಲ್ಲದೆ ಯಾರೆಲ್ಲ ತನಗೆ ತೊಂದರೆ ಕೊಟ್ಟಿದ್ದರು ಎಂಬ ವಿಚಾರವನ್ನು ಬರೆದಿಟ್ಟಿದ್ದ. ಇನ್ನೂ ಆರೋಪಿಗಳ ಬಗ್ಗೆ ಸ್ಪಷ್ಟವಾಗಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ, ತನಿಖೆಯಲ್ಲಿಯೂ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಕೂಗು ವ್ಯಕ್ತವಾಗಿತ್ತು. 

ಏನಿದು ಪ್ರಕರಣ: ಅಭಿಷೇಕ್ ಆಚಾರ್ಯ ಬರೆದಿಟ್ಟ ಡೆತ್ ನೋಟ್‌ನಲ್ಲಿ ನಿರೀಕ್ಷಾ, ರಾಕೇಶ್, ರಾಹುಲ್ ಹಾಗೂ ತಸ್ಲೀಮ್ ಎಂಬವರು ತನ್ನನ್ನು ಹನಿಟ್ರ್ಯಾಪ್ ಮಾಡಿ, ಹಣಕ್ಕಾಗಿ ಪೀಡಿಸುತ್ತಿದ್ದರು. 

ಹಣ ನೀಡದೇ ಇದ್ದಲ್ಲಿ ತನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ, ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದರು ಎಂದು ಸ್ಪಷ್ಟವಾಗಿ ಹೇಳಿದ್ದಾನೆ. 

ನಿರೀಕ್ಷಾ ಮತ್ತು ಅಭಿಷೇಕ್ ಇಬ್ಬರೂ ಮಂಗಳೂರಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಪರಿಚಯವಾಗಿ ಅವರ ಮಧ್ಯೆ ಸಂಬಂಧ ಬೆಳೆದಿತ್ತು. 
ಇನ್ನೂ ಖಾಸಗಿ ಕ್ಷಣಗಳನ್ನು ನಿರೀಕ್ಷಾ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಅದನ್ನು ಗಲ್ಫ್‌ ನಲ್ಲಿರುವ ತಸ್ಲೀಮಾಗೆ ಕಳಹಿಸಿ, ತನ್ನ ಸಹಚರರ ಮೂಲಕ ಆತನನ್ನು ಬ್ಲಾಕ್ ಮೇಲ್ ಮಾಡಿ 3 - 4 ಲಕ್ಷ ರು. ಹಣವನ್ನೂ ಪಡೆದಿದ್ದಾರೆ. ಹಣ ವರ್ಗಾವಣೆಗೆ ಆತನ ಮೊಬೈಲ್‌ನಲ್ಲಿ ಪುರಾವೆಗಳಿವೆ ಎಂದವರು ಹೇಳಿದರು.

ಈ ಗ್ಯಾಂಗ್ ಅಭಿಷೇಕ್ ಮಾತ್ರವಲ್ಲದೇ ಇನ್ನೂ ಕೆಲವರನ್ನು ಇದೇ ರೀತಿ ಬ್ಯಾಕ್ ಮೇಲ್ ಮಾಡಿದ ಮಾಹಿತಿ ಇದೆ. ಆದ್ದರಿಂದ ಪೊಲೀಸರು ತಕ್ಷಣ ತನಿಖೆ ನಡೆಸಿ, ಅಭಿಷೇಕ್‌ನ ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದವರು ಆಗ್ರಹಿಸಿದರು.ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ನವೀನ್ ಆಚಾರ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ಯ, ಮೃತರ ಸಂಬಂಧಿ ಸುಕೇಶ್ ಆಚಾರ್ಯ ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ