ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’

ಶುಕ್ರವಾರ, 10 ಫೆಬ್ರವರಿ 2023 (17:01 IST)
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರಿ ಮುಂಚೂಣಿಯಲ್ಲಿರುವ ಮೈಕ್ರೋಸಾಫ್ಟ್ ಪೋಷಿತ ‘ಚಾಟ್‌ ಜಿಪಿಟಿ’ಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’ ಎಂಬ ಸೇವೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಸಂಸ್ಥೆಯ ಸಿಇಒ ಸುಂದರ್‌ ಪಿಚೈ ಹೇಳಿದ್ದಾರೆ. ಈ ಕುರಿತಾಗಿ ಬ್ಲಾಗ್‌ನಲ್ಲಿ ಬರೆದಿರುವ ಅವರು, ಸಂವಹನ ನಡೆಸುವಂತಹ ಕೃತಕ ಬುದ್ಧಿಮತ್ತೆ ಸೇವೆಯನ್ನು ಜನರಿಗೆ ನೀಡುವ ಮೊದಲು ವಿಶ್ವಾಸಾರ್ಹ ಪರೀಕ್ಷಕರಿಂದ ಪರೀಕ್ಷಿಸಲಾಗುವುದು. ಬಳಿಕ ಆದಷ್ಟು ಶೀಘ್ರ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಗೂಗಲ್‌ ತಯಾರಿಸುತ್ತಿರುವ ‘ಬರ್ಡ್‌’, ನಾಸಾದ ಜೇಮ್ಸ್‌ವೆಬ್‌ ಟೆಲಿಸ್ಕೋಪ್‌ ಕುರಿತಾದಂತಹ ಕ್ಲಿಷ್ಟಕರ ಮಾಹಿತಿಯನ್ನೂ 9 ವರ್ಷದ ವಿದ್ಯಾರ್ಥಿಗೆ ಅರ್ಥ ಮಾಡಿಸುವಷ್ಟು ಸಮರ್ಥವಾಗಿರಲಿದೆ. ಇದು ವಿಶ್ವದ ಎಲ್ಲಾ ಮಾಹಿತಿ, ಬುದ್ಧಿವಂತಿಕೆ ಮತ್ತು ಸೃಜನಾತ್ಮಕ ಅಂಶಗಳನ್ನು ಒಳಗೊಂಡಿರಲಿದೆ. ಶೀಘ್ರದಲ್ಲೇ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಎಐ ಇರುವ ಟೂಲ್‌ ಕಾಣಿಸಿಕೊಳ್ಳಲಿದೆ ಎಂದು ಪಿಚೈ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾದ ಚಾಟ್‌ ಜಿಪಿಟಿ ಪ್ರಸ್ತುತ ಎಐ ಕ್ಷೇತ್ರದಲ್ಲಿ ಭಾರಿ ಹೆಸರು ಗಳಿಸಿಕೊಂಡಿದ್ದು, ಕೇಳಿದ ಪ್ರಶ್ನೆಗಳಿಗೆ ಅಗತ್ಯವಾದ ಮತ್ತು ಮಾಹಿತಿ ಪೂರ್ಣವಾದ ಉತ್ತರಗಳನ್ನು ಒದಗಿಸುತ್ತಿದೆ. ಅಂದಿನಿಂದ, ಓಪನ್‌ಎಐ ಚಾಟ್‌ಜಿಪಿಟಿಯ ಅಸಾಧಾರಣ ಸಾಮರ್ಥ್ಯಗಳನ್ನು ಮತ್ತು ದೈನಂದಿನ ಜೀವನದಲ್ಲಿ ಅದರ ಪ್ರಭಾವವನ್ನು ಬಹಿರಂಗಪಡಿಸಿದೆ. ಗೂಗಲ್  ಕಳೆದ 6 ವರ್ಷಗಳಿಂದ ಎಐನಲ್ಲಿ ಕೆಲಸ ಮಾಡುತ್ತಿದ್ದು, ಮತ್ತು ಅದು ಅಂತಿಮವಾಗಿ ‘ಬರ್ಡ್’  ಅನ್ನು ಬಹಿರಂಗಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ