ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

ಶುಕ್ರವಾರ, 10 ಫೆಬ್ರವರಿ 2023 (09:33 IST)
ಬೆಂಗಳೂರು : ಭೀಕರ ಭೂಕಂಪದಿಂದಾಗಿ ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಅವರಲ್ಲಿ 75 ಜನರು ಸಹಾಯವನ್ನು ಕೋರಿ ಕರೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ.
 
ಟರ್ಕಿಯಲ್ಲಿ ಸಿಲುದ್ದಾರೆ ಎನ್ನಲಾದ ಟೆಕ್ಕಿ ಬೆಂಗಳೂರಿನ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆತ ಬೇರೆ ರಾಜ್ಯದಿಂದ ಬಂದು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಿಂದ ಬ್ಯುಸಿನೆಸ್ ಟ್ರಿಪ್ಗಾಗಿ ಟರ್ಕಿಗೆ ತೆರಳಿದ್ದ, ಕಳೆದ ವಾರವಷ್ಟೇ ಬೆಂಗಳೂರು ಕಂಪನಿ ಪರವಾಗಿ ಪ್ರವಾಸ ಕೈಗೊಂಡಿದ್ದ ಎನ್ನಲಾಗಿದೆ.

ಸದ್ಯ ಭಾರತ ಸರ್ಕಾರ ಈ ವ್ಯಕ್ತಿ ಪತ್ತೆಗೆ ಮುಂದಾಗಿದೆ. ಇಲ್ಲಿ ತನಕ ವ್ಯಕ್ತಿ ನಾಪತ್ತೆ ಬಗ್ಗೆ ವಿಪತ್ತು ನಿರ್ವಹಣಾ ಸಹಾಯವಾಣಿಗೆ ಯಾವುದೇ ಕರೆಗಳು ಬಂದಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ