ಫೆ.12ರಂದು ಮುಸ್ಲಿಮರ ಬೃಹತ್ ಸಮಾವೇಶ

ಶುಕ್ರವಾರ, 10 ಫೆಬ್ರವರಿ 2023 (08:08 IST)
ನವದೆಹಲಿ : ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚಿಸಲು ಮುಸ್ಲಿಂ ಧರ್ಮಗುರುಗಳು ಹಾಗೂ ಇಸ್ಲಾಂ ಸಂಘಟನೆಯಾದ ಉಲಮಾ-ಇ-ಹಿಂದ್ ಇದೇ ಫೆಬ್ರವರಿ 12ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
 
ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದ್ದು, ಸಂಘಟನೆಯು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ. ಈ ಮೂಲಕ ಮದರಸಾಗಳಿಗೆ ಸ್ವಾಯತ್ತತೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿ ಸಮಸ್ಯೆ ಪರಿಹರಿಸಲು ಹಲವು ನಿರ್ಣಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. 

ಒಟ್ಟು ಮೂರು ದಿನಗಳ ಈ ಸಮಾವೇಶದಲ್ಲಿ ಫೆಬ್ರವರಿ 10 ಮತ್ತು 11ರಂದು ಮೊದಲ ಎರಡು ದಿನ ಸಾಮಾನ್ಯ ಅಧಿವೇಶನ ನಡೆಸಲಿದೆ. ನಂತರ ಭಾನುವಾರ (ಫೆ.12) ಸರ್ವಸದಸ್ಯರ ಸಮಾವೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ