ಕಾರ್ಪೋರೇಟ್‌ ಕಂಪೆನಿಗಳಿಂದ ಭಾರಿ ದೇಣಿಗೆ ಪಡೆದ ಬಿಜೆಪಿ: ಎಡಿಆರ್

ಶುಕ್ರವಾರ, 18 ಆಗಸ್ಟ್ 2017 (15:53 IST)
2012-13 ಮತ್ತು 2015-16ರ ನಡುವೆ ಕಾರ್ಪೋರೇಟ್ ಉದ್ಯಮಿಗಳು ರಾಷ್ಟ್ರೀಯ ಪಕ್ಷಗಳಿಗೆ ರೂ. 956.77 ಕೋಟಿ ದೇಣಿಗೆ ನೀಡಿದ್ದಾರೆ. ಉದ್ಯಮಿಗಳು ಅಪರಿಚಿತ ಮೂಲಗಳಿಂದ ಶೇ. 89 ರಷ್ಟು ಒಟ್ಟು ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ. 
2012 ರಿಂದ 2016 ರವರೆಗೆ ಉದ್ಯಮಿಗಳು ನೀಡಿದ 956.77 ಕೋಟಿ ದೇಣಿಗೆಯಲ್ಲಿ, ಬಿಜೆಪಿ ಬರೋಬ್ಬರಿ 705 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿ ಅಗ್ರಸ್ಥಾನದಲ್ಲಿದೆ. 196 ಕೋಟಿ ದೇಣಿಗೆ ಪಡೆಯುವ ಮೂಲಕ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ.
 
ಮಾಯಾವತಿ ನೇತೃತ್ವದ ಬಿಎಸ್ಪಿ ರಾಷ್ಟ್ರೀಯ ಪಕ್ಷವಾಗಿದ್ದರೂ ಸಹ 2012-13 ಮತ್ತು 2015-16ರ ನಡುವೆ ಯಾವುದೇ ದಾನಿಗಳಿಂದ ರೂ 20,000 ಕ್ಕಿಂತಲೂ ಹೆಚ್ಚಿನ ಸ್ವಯಂಪ್ರೇರಿತ ಕೊಡುಗೆಗಳನ್ನು ಸ್ವೀಕರಿಸಲಿಲ್ಲ ಎಂದು ಘೋಷಿಸಿದೆ.
 
2,987 ದಾನಿಗಳಿಂದ ಬಿಜೆಪಿ 705.81 ಕೋಟಿ ರೂ. ದೇಣಿಗೆ ಪಡೆದಿದೆ. 167 ಕಾರ್ಪೋರೇಟ್ ದಾನಿಗಳಿಂದ ಕಾಂಗ್ರೆಸ್ 198.16 ಕೋಟಿ ರೂ. ಪಡೆದಿದೆ ಎಂದು ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳು ಸಲ್ಲಿಸಿದ ವಿವರಗಳನ್ನು ಎಡಿಆರ್ ಉಲ್ಲೇಖಿಸಿದೆ.
 
ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಕ್ರಮವಾಗಿ 4% ಮತ್ತು 17% ರಷ್ಟು ಕಾರ್ಪೋರೇಟ್ ದೇಣಿಗೆಗಳನ್ನು ಪಡೆಯುವ ಮೂಲಕ ಅತಿ ಕಡಿಮೆ ದೇಣಿಗೆ ಪಡೆದ ಪಕ್ಷಗಳು ಎಂದು ಎಡಿಆರ್ ಉಲ್ಲೇಖಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ