ಇದು ರಾಜತಾಂತ್ರಿಕ ಕೇಂದ್ರ ಅಲ್ಲ. ಬದಲಾಗಿ ಭಾರತದ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಲು ಬಳಕೆಯಾಗುತ್ತಿದೆ. ಇತ್ತೀಚಿನ ವರದಿಗಳು ಇದನ್ನು ದೃಢೀಕರಿಸಿವೆ. ಪಾಕ್ 'ಹೈ ಕಮಿಷನ್ ಐಎಸ್ಐ ಅಡ್ಡಾ ಆಗಿ ಬದಲಾಗಿದೆ, ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶರ್ಮಾ ಹೇಳಿದ್ದಾರೆ.
2008ರ ಮುಂಬೈ ದಾಳಿಯಾಗಲಿ ಅಥವಾ ಬಾಲ್ಟಾ ಹೌಸ್ ಎನ್ ಕೌಂಟರ್ ಆಗಿರಲಿ, ಉಗ್ರರ ಹತ್ಯೆಗೈದಾಗಲೆಲ್ಲ ಕಾಂಗ್ರೆಸ್ ಭದ್ರತಾ ಪಡೆಗಳತ್ತ ಪ್ರಶ್ನೆ ಹಾಕಿದೆ. ಒಂದು ಕಡೆ ಭದ್ರತಾ ಪಡೆ ತಮ್ಮ ಜೀವನವನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತವೆ. ಇನ್ನೊಂದು ಕಡೆ ನಮ್ಮ ಇಟಲಿ ಕಾಂಗ್ರೆಸ್ ಮುಸ್ಲಿಂ ಮತಕ್ಕಾಗಿ ಅವರ ಎದೆಗುಂದಿಸುವ ಕೆಲಸ ಮಾಡುತ್ತಿದೆ. ಇಂತಹ ರಾಜಕೀಯ ಮುಸ್ಲಿಮರಿಗೆ ಮತ್ತು ದೇಶಕ್ಕೆ ಅಪಮಾನ ಮಾಡುವಂತಹ ಕೃತ್ಯವಷ್ಟೇ ಎಂದು ಅವರು ಆರೋಪಿಸಿದ್ದಾರೆ.