ರಾಹುಲ್ ಗಾಂಧಿ ಜ್ಯುವೆಲ್ಲರಿಗೆ ಭೇಟಿ ಕೊಟ್ಟ ಮರುದಿನವೇ ನೀರವ್ ಮೋದಿಗೆ ಲೋನ್ ಮಂಜೂರಾಗಿತ್ತಂತೆ!

ಶನಿವಾರ, 17 ಫೆಬ್ರವರಿ 2018 (10:30 IST)
ನವದೆಹಲಿ: ಸಾವಿರಾರು ಕೋಟಿ ರೂ  ವಂಚನೆ ಮಾಡಿ ವಿದೇಶಕ್ಕೆ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ವಂಚನೆಯನ್ನು ಕೆಲವು ವರ್ಷಗಳ ಹಿಂದೆಯೇ ಬ್ಯಾಂಕ್ ಅಧಿಕಾರಿಯೊಬ್ಬರು ಗಮನಕ್ಕೆ ತಂದರೂ ಅಂದಿನ ಯುಪಿಎ ಸರ್ಕಾರ ಕಿವಿಗೊಡಲಿಲ್ಲವೆಂಬುದು ಇದೀಗ ಬೆಳಕಿಗೆ ಬಂದಿದೆ.
 

ನೀರವ್ ಮೋದಿ ಸಂಬಂಧಿ ಒಡೆತನದ ಗೀತಾಂಜಲಿ ಜೆಮ್ಸ್ ಸಂಸ್ಥೆಗೆ ನೀಡಲಾಗುತ್ತಿ ಲೋನ್ ನಲ್ಲಿ ಅಕ್ರಮ ಕಂಡುಬಂದಿದ್ದನ್ನು ಕೇಂದ್ರದ ಯುಪಿಎ ಸರ್ಕಾರಕ್ಕೆ ಹೇಳಿದ್ದೆ. ಆದರೆ ಲೋನ್ ಪಾಸ್ ಮಾಡಲೇಬೇಕು ಎಂದು ನನಗೆ ನಿರ್ದೇಶನ ಬಂತು. ನನ್ನ ದೂರನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅಲಹಾಬಾದ್ ಬ್ಯಾಂಕ್ ನ ಮಾಜಿ ವ್ಯವಸ್ಥಾಪಕ ದಿನೇಶ್ ದುಬೆ ಹೇಳಿದ್ದಾರೆ.

‘ಗೀತಾಂಜಲಿ ಜೆಮ್ಸ್ ತಾನು ಈ ಮೊದಲು ಪಡೆದಿದ್ದ 1,500 ಕೋಟಿ ರೂ. ಸಾಲ ಮರುಪಾವತಿ ಮಾಡಿದರಷ್ಟೇ ಹೊಸ ಸಾಲ ನೀಡಬಹುದಿತ್ತು. 2013 ರಲ್ಲಿ ನೀರವ್ ಮೋದಿ ಒಡೆತನದ ಜ್ಯುವೆಲ್ಲರಿ ಪ್ರದರ್ಶನ ಮಳಿಗೆಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಅದರ ಮರುದಿನವೇ ನೀರವ್ ಮೋದಿಗೆ ಸಾಲ ಮಂಜೂರಾಗಿತ್ತು. ದಿನೇಶ್ ದುಬೆ ವಿರೋಧವಿದ್ದರೂ ಸಾಲ ಮಂಜೂರಾಗಿದ್ದು ಹೇಗೆ?’ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವೇಡ್ಕರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ