ಮೀಸಲಾತಿ ಮೂಲಕ ಜನರನ್ನು ಬಿಜೆಪಿ ಬೇಕುಫ್ ಮಾಡುತ್ತಿದೆ : ಸುರ್ಜೆವಾಲಾ
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೂಡಲೇ ಸಂವಿಧಾನ ತಿದ್ದುಪಡಿ ಮೂಲಕ ಮೀಸಲಾತಿ ಅಧಿಕೃತಗೊಳಿಸಬೇಕು. ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡಿರುವುದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ.
ನಮ್ಮ ಸರ್ಕಾರ ಇದ್ದಾಗಲೆ ನಾಗಮೋಹನ್ ದಾಸ್ ವರದಿಗೆ ಸೂಚಿಸಲಾಗಿತ್ತು, ಆದರೆ ಬಿಜೆಪಿ ಸುಗ್ರೀವಾಜ್ಞೆ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ ವರದಿಯನ್ನು ಬಿಜೆಪಿ ಯಾಕೆ ಅನುಷ್ಠಾನಕ್ಕೆ ತರಲಿಲ್ಲ? ಮುಂದಿನ ಐದು ತಿಂಗಳಲ್ಲಿರುವ ಚುನಾವಣಾ ಆಧರಿಸಿ ಈ ನಿರ್ಧಾರ ತೆಗೆದುಕೊಂಡಿದೆ.