‘ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಒಪ್ಪಿಗೆ’

ಗುರುವಾರ, 20 ಅಕ್ಟೋಬರ್ 2022 (17:59 IST)
SC,ST ಮೀಸಲಾತಿ ಹೆಚ್ಚಳ ವಿಚಾರಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, SC ಮೀಸಲಾತಿಯನ್ನು 15 ರಿಂದ 17 ಹೆಚ್ಚಳ ಹಾಗೂ ST ಮೀಸಲಾತಿ 3 ರಿಂದ 7% ಹೆಚ್ಚಳ ಮಾಡಲಾಗಿದೆ. ಮೀಸಲಾತಿ ಬಿಗಿಗೊಳಿಸಲು ಸುಗ್ರೀವಾಜ್ಙೆ ತರಲು ಸಂಪುಟ ಸಭೆ ಒಪ್ಪಿದೆ. ಇದನ್ನ ರಾಜ್ಯಪಾಲರಿಗೆ ಕಳಿಸಲು ನಿರ್ಧರಿಸಿದ್ದೇವೆ. ಆರ್ಟಿಕಲ್ 14, 15, 35 ಸೇರಿ ಎಲ್ಲವನ್ನ ಪರಿಶೀಲಿಸಿದ್ದೇವೆ. ನಾವು ಹಾಗೆಯೇ ಅನುಷ್ಟಾನಕ್ಕೆ ತರಲು ಮುಂದಾಗಿದ್ವಿ. ಕೋರ್ಟ್​ನಲ್ಲಿ ಚಾಲೆಂಜ್ ಆಗಬಹುದು. ಹಾಗಾಗಿ ಸುಗ್ರೀವಾಜ್ಙೆ ಮೂಲಕವೇ ತರಲು ಹೊರಟಿದ್ದೇವೆ. ರಾಜ್ಯಪಾಲರಿಗೆ ಸುಗ್ರೀವಾಜ್ಙೆ ಕಳಿಸುತ್ತೇವೆ ಎಂದರು. ನಂತರ ಕುಡಿಯುವ ನೀರಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಬಾನಗುಂದಿ 260 ಹಳ್ಳಿಗಳಿಗೆ 260 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು 24 ಯೋಜನೆಗಳಿಗೆ ಸಂಪುಟ ಅಸ್ತು ಎಂದಿದೆ. ಹಿರಿಯೂರಿನ 300 ವಸತಿಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಒಟ್ಟು 592 ಕೋಟಿ ಅನುದಾನ ನೀಡಲಾಗಿದೆ ಎಂದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ