Lok Sabha election result: ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಜೊತೆ ಇಂದು ಬಿಜೆಪಿ ಮೀಟಿಂಗ್
ಬಿಜೆಪಿ ಗೆದ್ದಿರುವುದು 240 ಸ್ಥಾನಗಳನ್ನು ಮಾತ್ರ. ಬಹುಮತ ಸಾಬೀತುಪಡಿಸಲು ಇನ್ನೂ 32 ಸ್ಥಾನಗಳ ಕೊರತೆ ಬಿಜೆಪಿಗಿದೆ. ಈಗಿರುವ ಎನ್ ಡಿಎ ಮೈತ್ರಿಕೂಟಗಳು ಒಟ್ಟಾದರೆ 292 ಸ್ಥಾನ ಸಿಗಲಿದೆ. ಆದರೆ ಇದೇ ವೇಳೆ ಕಾಂಗ್ರೆಸ್ ಕೂಡಾ ಈ ಪಕ್ಷಗಳನ್ನು ತನ್ನ ತೆಕ್ಕೆಗೆ ಎಳೆಯಲು ಪ್ರಯತ್ನಿಸುತ್ತಿದೆ.
ಈ ನಡುವೆ ಇಂದು ಬಿಜೆಪಿ ತನ್ನ ಮಿತ್ರ ಪಕ್ಷಗಳ ಜೊತೆ ಸಭೆ ನಡೆಸಲು ಮುಂದಾಗಿದೆ. ಜೆಡಿಯು ಮತ್ತು ಟಿಡಿಪಿ ಈಗ ಕಿಂಗ್ ಮೇಕರ್ ಗಳಾಗಿದ್ದು ಸದ್ಯಕ್ಕೆ ಎನ್ ಡಿಎ ಜೊತೆಗಿರುವ ಈ ಎರಡೂ ಪಕ್ಷಗಳ ನಾಯಕರೂ ಇಂದಿನ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಬ್ಬರನ್ನೂ ತನ್ನಲ್ಲೇ ಇಟ್ಟುಕೊಳ್ಳಲು ಬಿಜೆಪಿ ಈ ನಾಯಕರಿಗೆ ಯಾವ ಆಫರ್ ನೀಡಲಿದೆ ಎನ್ನುವುದು ಮಹತ್ಚದ್ದಾಗಲಿದೆ. ಇಂದು ಈ ಇಬ್ಬರೂ ನಾಯಕರು ಎನ್ ಡಿಎಗೆ ಬೆಂಬಲ ಘೋಷಿಸುವ ಕುರಿತು ಅಧಿಕೃತವಾಗಿ ಹೇಳಿಕೆ ಪ್ರಕಟಿಸಲಿದ್ದಾರೆ.