Lok Sabha election 2024 result: ವಾರಣಾಸಿಯಲ್ಲಿ ಮೋದಿ ಹ್ಯಾಟ್ರಿಕ್ ಗೆಲುವು
ವಾರಣಾಸಿಯಲ್ಲಿ ಕಳೆದ ಎರಡೂ ಲೋಕಸಭೆ ಚುನಾವಣೆಯಲ್ಲಿ ಮೋದಿ ಹೂವು ಎತ್ತಿದಷ್ಟು ಸುಲಭವಾಗಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಹಾಗಿರಲಿಲ್ಲ. ಒಂದು ಹಂತದಲ್ಲಿ ಮೋದಿ ಹಿನ್ನಡೆ ಕೂಡಾ ಅನುಭವಿಸಿದ್ದರು. ಇದು ಗಮನಾರ್ಹ ವಿಚಾರವಾಗಿದೆ.
ಆದರೆ ಅಂತಿಮವಾಗಿ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಈ ಬಾರಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಅಜಯ್ ರೈ, ಬಿಎಸ್ ಪಿಯಿಂದ ಅಥರ್ ಜಮಾಲ್ ಲಾರಿ ಪ್ರಮುಖ ಸ್ಪರ್ಧಿಗಳಾಗಿದ್ದರು.
ಅಂತಿಮವಾಗಿ ಮೋದಿ 6,12,970 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014 ರಲ್ಲಿ ಮೊದಲ ಬಾರಿಗೆ ಮೋದಿ ಇಲ್ಲಿಂದ ಸ್ಪರ್ಧಿಸಿದ್ದರು. ಇದೀಗ ಮೂರೂ ಬಾರಿ ಇಲ್ಲಿಂದ ಗೆದ್ದು ದಾಖಲೆ ಮಾಡಿದ್ದಾರೆ.