ನೆಹರೂ, ಗಾಂಧಿ ಚಿಂತನೆಗಳು ಗೊಬ್ಬರಕ್ಕೆ ಸಮ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ
ಸೋಮವಾರ, 23 ಅಕ್ಟೋಬರ್ 2017 (10:51 IST)
ನವದೆಹಲಿ: ನೆಹರೂ ಮತ್ತು ಗಾಂಧೀಜಿ ಚಿಂತನೆಗಳನ್ನು ಹೇಳಿ ಜನರ ಮನದಲ್ಲಿ ಗೊಬ್ಬರ ತುಂಬಿಸಲಾಗಿದೆ ಎಂದು ಬಿಜೆಪಿ ಸಂಸದ ಕಾಮಾಕ್ಯ ಪ್ರಸಾದ್ ತಾಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಸ್ಸಾಂನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಕಾಮಾಕ್ಯ ಜನರಿಗೆ ಧೀನದಯಾಳ್ ಉಪಾಧ್ಯಾಯರ ಚಿಂತನೆಗಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಅದಕ್ಕೆ ಕಾರಣ ಅವರ ಮನಸ್ಸಲ್ಲಿ ಗಾಂಧೀಜಿ, ನೆಹರೂ ಅವರ ಚಿಂತನೆಗಳೆಂಬ ಗೊಬ್ಬರವನ್ನೇ ತುಂಬಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದೀಗ ವಿವಾದಕ್ಕೆ ಎಡೆಮಾಡಿದ್ದು, ಕಾಂಗ್ರೆಸ್ ಬಿಜೆಪಿ ಸಂಸದನ ವಿರುದ್ಧ ದೂರು ನೀಡಿದೆ. ವಿಶೇಷವೆಂದರೆ ಸಂಸದ ಕಾಮಕ್ಯ ಈ ಹೇಳಿಕೆ ನೀಡುವಾಗ ಅದೇ ವೇದಿಕೆಯಲ್ಲಿ ಅಸ್ಸಾಂ ಸಿಎಂ ಸರ್ಬಂದ ಸೋನೇವಾಲ್ ಕೂಡಾ ಉಪಸ್ಥಿತರಿದ್ದರು. ಆದರೆ ವಿವಾದವಾಗುತ್ತಿದ್ದಂತೆ ಸಂಸದ ಕಾಮಕ್ಯ ತಾನು ಗಾಂಧಿ ಎಂದು ಹೇಳಿದ್ದು, ಮಹಾತ್ಮಾ ಗಾಂಧೀಜಿಯವರನ್ನಲ್ಲ, ಗಾಂಧಿ ಎಂದು ಹೆಸರಿಟ್ಟುಕೊಂಡಿರುವ ಕುಟುಂಬದವರ ಬಗ್ಗೆ ಎಂದು ತೇಪೆ ಹಾಕುವ ಯತ್ನ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ