ರಾಹುಲ್ ಗಾಂಧಿ ಟ್ವಿಟರ್ ‘ದಾಖಲೆ’ಯ ಸಾಚಾತನ ಪ್ರಶ್ನಿಸಿದ ಬಿಜೆಪಿ

ಭಾನುವಾರ, 22 ಅಕ್ಟೋಬರ್ 2017 (07:33 IST)
ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಟ್ವಿಟರ್ ನಲ್ಲಿ ರಿಟ್ವೀಟ್ ಗಳ ಸಂಖ್ಯೆಯಲ್ಲಿ ಪ್ರಧಾನಿ ಮೋದಿಯವರನ್ನೂ ಹಿಂದಿಕ್ಕಿದ್ದಾರೆ ಎಂದು ದಾಖಲೆ ಮಾಡಿದ್ದಾಗಿ ವರದಿಯಾಗಿತ್ತು.

 
ಆದರೆ ಅದರ ಅದಕ್ಕೆ ಬೋಟ್ ಎನ್ನುವ ಟ್ವಿಟರ್ ಸಾಫ್ಟ್ ವೇರ್ ಕಾರಣ ಎಂದು ಇದೀಗ ವರದಿಗಳು ಬರುತ್ತಿವೆ. ರಷ್ಯಾ, ಕಝಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲೂ ರಾಹುಲ್ ಟ್ವೀಟ್ ಗಳು ರಿಟ್ವೀಟ್ ಆಗುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಈ ಸಾಫ್ಟ್ ವೇರ್ ಕಾರಣ ಎನ್ನಲಾಗಿದೆ.

ಇದೀಗ ಬಿಜೆಪಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವೆ ಸ್ಮೃತಿ ಇರಾನಿ ಬಹುಶಃ ರಾಹುಲ್ ಗೆ ರಷ್ಯಾ, ಕಝಕಿಸ್ತಾನ ಮತ್ತು ಇಂಡೋನೇಷ್ಯಾ ಚುನಾವಣೆಯಲ್ಲೂ ಜಯಭೇರಿ ಭಾರಿಸುವ ಉದ್ದೇಶವಿರಬಹುದು ಎಂದು ಟೀಕಿಸಿದ್ದಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ, ಮಾಜಿ ಸಂಸದೆ ರಮ್ಯಾ ಒಂದು ಟ್ವೀಟ್ ಬಹಿರಂಗವಾದ ಮೇಲೆ ಅದರ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ. ಅದು ಹೇಗೆಲ್ಲಾ ಬಳಕೆಯಾಗುತ್ತದೆ ಎಂದು ನಮಗೆ ಗೊತ್ತಿಲ್ಲ. ಈ ಬಗ್ಗೆ ಬಿಜೆಪಿ ವೃಥಾ ಸುಳ್ಳು ಸುದ್ದಿ ಹರಡುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ