ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಘೋಷ ವಾಕ್ಯವೇನು ಗೊತ್ತಾ?

ಸೋಮವಾರ, 10 ಸೆಪ್ಟಂಬರ್ 2018 (09:33 IST)
ನವದೆಹಲಿ: ನವದೆಹಲಿಯಲ್ಲಿ ನಿನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಹೊಸ ಘೋಷವಾಕ್ಯ ಬಿಡುಗಡೆಗೊಳಿಸಲಾಗಿದೆ.

ಕಳೆದ ಬಾರಿ ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂದು ಬಿಜೆಪಿ ಘೋಷ ವಾಕ್ಯ ಮಾಡಿತ್ತು. ಇದು ಭಾರೀ ಜನಪ್ರಿಯವಾಗಿತ್ತು. ಈ ಬಾರಿ ಹಿರಿಯ ನಾಯಕ, ಇತ್ತೀಚೆಗಷ್ಟೇ ನಿಧನರಾದ ಅಟಲ್ ಬಿಹಾರಿ ವಾಜಪೇಯಿ ಹೆಸರಿನೊಂದಿಗೆ ಹೊಸ ಘೋಷವಾಕ್ಯ ಮೊಳಗಿಸಲಿದೆ.

‘ಅಜೇಯ ಭಾರತ, ಅಟಲ್ ಭಾಜಪ’ ಎಂಬ ಹೊಸ ಘೋಷವಾಕ್ಯವನ್ನು ನಿನ್ನೆ ಪ್ರಧಾನಿ ಮೋದಿ ಬಹಿರಂಗಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ಮುಂಬರುವ ಲೋಕಸಭೆ ಚುನಾವಣೆ ಗೆಲ್ಲುವುದು ಮಾತ್ರವಲ್ಲ, ಮುಂದಿನ 50 ವರ್ಷಗಳ ಕಾಲ ನಾವೇ ದೇಶವನ್ನು ಆಳುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ