ಅಂದು ವಾಜಪೇಯಿ ಹಾಕಿದ ಸವಾಲು ಇಂದು ನಿಜವಾಗಿದೆ!
ಇಂತಹದ್ದೊಂದು ಟ್ವೀಟ್ ನ್ನು ಬಿಜೆಪಿ ನಾಯಕರು ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅಂದು ಸರ್ಕಾರ ಬಿದ್ದು ಹೋದಾಗ ವಾಜಪೇಯಿ ‘ಇಂದು ನಾವು ಸಂಖ್ಯಾ ಬಲದಲ್ಲಿ ಕಡಿಮೆ ಇದ್ದೇವೆ ಎಂದು ಅಪಹಾಸ್ಯ ಮಾಡುತ್ತಿದ್ದೀರಾ. ಮುಂದೊಂದು ದಿನ ಇಡೀ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅಂದು ಇಡೀ ದೇಶ ನಿಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತದೆ’ ಎಂದು ವಾಜಪೇಯಿ ಹೇಳಿದ್ದರು ಎಂದು ಬಿಜೆಪಿ ನಾಯಕರು ಮೆಸೇಜ್ ಹರಿಯಬಿಟ್ಟಿದ್ದಾರೆ.
ಈಶಾನ್ಯ ರಾಜ್ಯಗಳ ಚುನಾವಣೆಯಲ್ಲೂ ಗೆಲುವು ಸಾಧಿಸಿದ ನಂತರ ಇದೀಗ ಕಾಂಗ್ರೆಸ್ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಂಡಿದೆ. ಇದೇ ವಿಚಾರಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಈ ರೀತಿ ಲೇವಡಿ ಮಾಡುತ್ತಿದ್ದಾರೆ.