ಬಿಜೆಪಿಯ ಅಲಿಖಿತ ವಯಸ್ಸಿನ ಮಿತಿ; ಹಿರಿಯ ಸಂಸದರ ಸಂಖ್ಯೆಯಲ್ಲಿ ಇಳಿಕೆ

ಬುಧವಾರ, 2 ನವೆಂಬರ್ 2016 (16:27 IST)
ಬಿಜೆಪಿಯ ಅಲಿಖಿತ ವಯಸ್ಸಿನ ಮಿತಿಯಿಂದಾಗಿ ಸಂಸತ್ತಿನಲ್ಲಿ ಬಿಜೆಪಿಯ ಹಿರಿಯ ಸಂಸದರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಲೋಕಸಭೆಯಲ್ಲಿ 70 ವರ್ಷಕ್ಕಿಂತ ಹೆಚ್ಚಿನವರ ಸಂಖ್ಯೆ 14.2 % (15ನೇ ಲೋಕಸಭೆಯಲ್ಲಿ) ದಿಂದ 8.8 %ಕ್ಕೆ ಇಳಿದಿದ್ದು,  25 ರಿಂದ 40 ವರ್ಷದೊಳಗಿನ ಸಂಸದರ ಸಂಖ್ಯೆಯಲ್ಲಿ 5.8ರಿಂದ 7.8 ಏರಿಕೆಯಾಗಿದೆ. 
ಪಿಆರ್‌ಎಸ್ ಶಾಸಕಾಂಗ ಸಂಶೋಧನೆ ಬಹಿರಂಗ ಪಡಿಸಿರುವ ಇಂಡಿಯಾಸ್ಪೆಂಡ್ ಅನಾಲಿಸಿಸ್ ಡೇಟಾದಲ್ಲಿ ಇದು ಬಹಿರಂಗವಾಗಿದೆ. 
 
ಆದರೆ ಕಾಂಗ್ರೆಸ್‌ನಲ್ಲಿ ಇದು ಬಿಜೆಪಿಗೆ ಸಂಪೂರ್ಣ ವಿರುದ್ಧವಾಗಿದೆ. ಹಳೆಯ ಪಕ್ಷದಲ್ಲಿ ಯುವ ಸಂಸದರ ಸಂಖ್ಯೆ 8.1ರಿಂದ 6.7ಕ್ಕೆ ಇಳಿಕೆಯಾಗಿದ್ದರೆ, ಹಿರಿಯ ಸಂಸದರ ಸಂಖ್ಯೆ 11.9ರಿಂದ 20 ಪ್ರತಿಶತಕ್ಕೆ ಏರಿದೆ. 
 
ಸಂಸದರ ಸರಾಸರಿ ವಯಸ್ಸು 46.5 (ಮೊದಲ ಲೋಕಸಭೆ 1952ರಿಂದ 16 ಲೋಕಸಭೆ ಅವಧಿ)ರಿಂದ 56 ವರ್ಷಗಳಿಗೆ ಏರಿಕೆಯಾಗಿದೆ. ಮೊದಲ ಲೋಕಸಭೆಯಲ್ಲಿ 489 ಸಂಸದರಿದ್ದರೆ, ಪ್ರಸ್ತುತ ಲೋಕಸಭೆ 550 ಸಂಸದರನ್ನು ಹೊಂದಿದೆ.
 
ಪ್ರಸ್ತುತ ಲೋಕಸಭಾ ಸ್ವತಂತ್ರ ಭಾರತದ ಎರಡನೇ ಹಳೆಯ ಮನೆ ಎನಿಸಿಕೊಂಡಿದೆ. ಹಿಂದಿನ ಲೋಕಸಭೆ (15) ಮೊದಲ ಹಳೆಯ ಮನೆ ಆಗಿತ್ತು. ಯುವ ಭಾರತ 56-70 ವಯಸ್ಸಿನ ಹೆಚ್ಚು ಸಂಸದರನ್ನು ಹೊಂದಿದೆ.
 
ಸದ್ಯ ಲೋಕಸಭೆಯಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಸಂಸದರಿಗೆ 28 ವರ್ಷ. ಹಿರಿಯ ಸಂಸದರಿಗೆ 88 ವರ್ಷ. ಸಂಸದರ ಸರಾಸರಿ ವಯಸ್ಸು 58. ಅರ್ಧಕ್ಕಿಂತ ಹೆಚ್ಚಿನ ಸಂಸದರು 58 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ