ಎಲ್ಲಾ ಕಪ್ಪು ಹಣದ ಇಫೆಕ್ಟ್: ಇನ್ನು ಮುಂದೆ ಇವರ ಬ್ಯಾಟರಿ ಬಂದ್!

ಮಂಗಳವಾರ, 28 ಫೆಬ್ರವರಿ 2017 (14:00 IST)
ನವದೆಹಲಿ: ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ ಸುಮಾರು 7 ಲಕ್ಷ ಗುಪ್ತ ಸಂಸ್ಥೆಗಳಿಗೆ ಬೀಗ ಜಡಿಯಲು ಚಿಂತನೆ ನಡೆಸಿದೆ.


ಹಲವು ಗುಪ್ತ ಸಂಸ್ಥೆಗಳು ಭಾರೀ ಮೊತ್ತದ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇಂತಹ ವಂಚಕರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

500 ಮತ್ತು 1000 ರೂ.ಗಳ ನೋಟು ಅಮಾನ್ಯಗೊಂಡ ನಂತರ ಹಲವು 1,238 ಕೋಟಿ ರೂ.ಗಳಷ್ಟು ಗುಪ್ತ ಮತ್ತು  ಅನಾಮದೇಯ ಸಂಸ್ಥೆಗಳ ಹೆಸರಿನಲ್ಲಿ ಹಣ ಜಮೆಯಾಗಿದೆ. ನೋಟು ಅಮಾನ್ಯಗೊಂಡ ಹಿನ್ನಲೆಯಲ್ಲಿ ತಮ್ಮ ಕಪ್ಪು ಹಣ ಸುರಕ್ಷಿತವಾಗಿಡಲು ವಂಚಕರು ಇಂತಹ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಗಂಭೀರ ವಂಚನೆ ತನಿಖಾ ಸಂಸ್ಥೆ (ಎಸ್ ಎಫ್ ಐ ಒ) ಹೇಳಿದೆ. ಇಂತಹ ವಂಚಕ ಕಂಪನಿಗಳ ಮಾಲಿಕರ ವಿವರಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ತಕ್ಕ ಪಾಠ ಕಲಿಸಲು ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ