ಬಿಕೆಸಿ ಲಸಿಕಾ ಕೇಂದ್ರದಲ್ಲಿ ಎರಡನೇ ಡೋಸ್ ಸ್ವೀಕರಿಸಿ ಮಾತನಾಡಿದ ಸ್ನೇಹಲ್, ದೈನಂದಿನ ಜೀವನದಲ್ಲಿ ಮಹಿಳೆಯರಿಗೆ ಬಿಡುವೇ ಸಿಗದ ಕಾರಣ ನಮಗೆ ಲಸಿಕೆಯ ಸ್ಲಾಟ್ ಸಮಯಕ್ಕೆ ಸರಿಯಾಗಿ ತೆರಳಲು ಆಗುತ್ತಿರಲಿಲ್ಲ. ಅಲ್ಲದೇ ಅನೇಕ ಸಂದರ್ಭಗಳಲ್ಲಿ ಲಸಿಕೆಗೆ ಪೂರ್ವ ನೋಂದಣಿ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಅನೇಕ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ವೆಚ್ಚವನ್ನು ಭರಿಸುವುದು ಸಾಧ್ಯವಿರಲಿಲ್ಲ. ಇಂತಹ ಸಂದರ್ಭದಲ್ಲಿ ಬಿಎಂಸಿ ಮಾಡಿರುವ ಈ ವಿನೂತನ ಪ್ರಯತ್ನ ನಿಜಕ್ಕೂ ಸಹಕಾರಿ ಎಂದು ಹೇಳಿದರು.
ಮಹಿಳೆಯರಿಗೆಂದೆ ಮೀಸಲಿರುವ ಈ ವಿಶೇಷ ಲಸಿಕಾ ಅಭಿಯಾನವು ಬೆಳಗ್ಗೆ 10:30ರಿಂದ 6:30ರ ವರೆಗೆ 24 ವಾರ್ಡ್ಗಳಲ್ಲಿ ನಡೆದಿದೆ. ಇಲ್ಲಿ ಸ್ಲಾಟ್ಗೆ ಮುಂಗಡ ನೋಂದಣಿ ಮಾಡುವ ಅಗತ್ಯವಿಲ್ಲ. ಯಾವುದೇ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಮಹಿಳೆಯರು ಬಂದು ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಪಡೆಯಬಹುದಾಗಿದೆ.