ದೇಹದ ಭಾಗಗಳು ಕೊಳದಲ್ಲಿ ಪತ್ತೆ!

ಭಾನುವಾರ, 20 ನವೆಂಬರ್ 2022 (15:19 IST)
ಕೋಲ್ಕತ್ತಾ : ಮಾಜಿ ನೌಕಾಪಡೆ ಅಧಿಕಾರಿಯೊಬ್ಬರನ್ನು ತನ್ನ ಮಗನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
 
ಮಾಜಿ ಅಧಿಕಾರಿಯ ಮೃತದೇಹ ಛಿದ್ರವಾದ ಸ್ಥಿತಿಯಲ್ಲಿ ಬುರುಯಿರ್ಪುರ ಪ್ರದೇಶದ ಕೊಳದಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಅವರು 2000 ಇಸವಿಯಲ್ಲಿ ನಿವೃತ್ತರಾದ ಭಾರತೀಯ ನೌಕಾಪಡೆಯ ಮಾಜಿ ನಾನ್ ಕಮಿಷನ್ಡ್ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಚಕ್ರವರ್ತಿ ಅವರು ನಾಪತ್ತೆಯಾಗಿರುವುದಾಗಿ ನವೆಂಬರ್ 15 ರಂದು ಅವರ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಬುರುಯಿರ್ಪುರದ ಕೊಳದಲ್ಲಿ ಪ್ಲಾಸ್ಟಿಕ್ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ