ಹೆಂಡತಿಯ ಕಾಟ ತಳ್ಳಾರದೇ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶ್ರೀನಗರ ಬಳಿಯ ಅವಲಹಳ್ಳಿಯಲ್ಲಿ ನಡೆದಿದೆ.ಗಂಡ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಅಣ್ಣಯ್ಯ ಆತ್ಮಹತ್ಯೆ ಮಾಡಿಕೊಂಡ ಗಂಡನಾಗಿದ್ದು,ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಎಂಬುದು ತಿಳಿದುಬಂದಿದೆ.ಉಮಾ ಎಂಬಾಕೆಯನ್ನು ಐದು ವರ್ಷಗಳ ಹಿಂದೆ ಮದುವೆ ಆಗಿದ್ದ.ಮದುವೆ ಬಳಿಕ ಗಂಡ ಹೆಂಡತಿ ಜಗಳ ಮಾಡಿಕೊಂಡಿದ್ರು.ಬಾರ್ ಒಂದರಲ್ಲಿ ಅಣ್ಣಯ್ಯ ಕ್ಯಾಶಿಯರ್ ಅಗಿದ್ದು,ಎಷ್ಟು ದುಡಿದ್ರು ಹೆಂಡತಿ ದುಡ್ಡು ದುಡ್ಡು ಎನ್ನುತ್ತಾಳೆ.ನಾನು ಎಷ್ಟು ದುಡಿದ್ರು ಸಾಕಾಗುವುದಿಲ್ಲ.ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಆಗಿದೆ.ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹನುಮಂತ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.