ಬಾಲಿವುಡ್ ನಟ ಸೋನು ಸೂದ್ ಹೊಸ ಕೆಲಸಕ್ಕೆ ಭಾರೀ ಲೈಕ್ಸ್
ಲಾಕ್ ಡೌನ್ ಜಾರಿಯಲ್ಲಿ ಇದ್ದಾಗಿನಿಂದ ಅನ್ ಲಾಕ್ ಆದ ನಂತರವೂ ಬಾಲಿವುಡ್ ನಟ ಸೋನು ಸೂದ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಲೇ ಇದೆ.
ಬಾಲಿವುಡ್ ನಟ ಸೋನು ಸೂದ್ ಸಾಂಕ್ರಾಮಿಕ ರೋಗದ ತೀವ್ರ ಬಿಕ್ಕಟ್ಟಿನಲ್ಲಿ ಕೆಲವರಿಗೆ ಆಪತ್ ಬಾಂಧವನಾಗಿ ಮುಂದುವರೆದಿದ್ದು, ಸಿನಿಮಾ ತಾರೆ ಈಗ ಗಣೇಶ ಚತುರ್ಥಿಗಾಗಿ 300 ವಲಸಿಗರನ್ನು ತಮ್ಮ ಗ್ರಾಮಗಳಿಗೆ ಕಳುಹಿಸಿದ್ದಾರೆ.
ಮುಂಬೈನ ಲಾಲ್‌ಬಾಗ್‌ನಲ್ಲಿ ಮತ್ತು ಪ್ರಭಾದೇವಿಯ ಸಿದ್ಧಿವಿನಾಯಕ್ ದೇವಸ್ಥಾನದ ಹಿಂದೆ ವಾಸಿಸುವ ಕೆಲವು ವಲಸೆ ಕಾರ್ಮಿಕರು ನನಗೆ ಮನವಿ ಮಾಡಿದರು. ಅಗತ್ಯವಿರುವ ಎಲ್ಲ ಅನುಮತಿಗಳೊಂದಿಗೆ ನಾನು ಅವರಿಗೆ ಬಸ್ಸುಗಳ ವ್ಯವಸ್ಥೆ ಮಾಡಿರುವೆ. ಸುಮಾರು 300 ಜನರ ಮೊದಲ ಬ್ಯಾಚ್ ಐದು ದಿನಗಳ ಹಿಂದೆ ತೆರಳಿದ್ದು, ಮತ್ತೊಂದು ಬ್ಯಾಚ್ ಶೀಘ್ರದಲ್ಲೇ ಹೊರಡಲಿದೆ ಎಂದಿದ್ದಾರೆ.