ರೇಪ್ ಆರೋಪಿಗೆ ಬಾಂಬೆ ಹೈಕೋರ್ಟ್ ಆದೇಶ

ಮಂಗಳವಾರ, 18 ಅಕ್ಟೋಬರ್ 2022 (09:01 IST)
ಮುಂಬೈ : ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಆದರೆ ಆತನಿಗೆ ನಾಪತ್ತೆಯಾಗಿರುವ ಸಂತ್ರಸ್ತ ಯುವತಿಯೊಂದಿಗೆ 1 ವರ್ಷದೊಳಗೆ ಮದುವೆಯಾಗಬೇಕು ಎಂದು ಷರತ್ತು ವಿಧಿಸಿದೆ.

ಹೌದು, ಅತ್ಯಾಚಾರ ಆರೋಪಿ 22 ವರ್ಷದ ಯುವತಿಯೊಂದಿಗೆ ಸಮ್ಮತಿಯ ಸಂಬಂಧದಲ್ಲಿಯೇ ಇದ್ದರು. ಆದರೆ ಆಕೆ ಗರ್ಭಿಣಿಯಾಗಿದ್ದನ್ನು ತಿಳಿದ ಯುವಕ ಬಳಿಕ ಆಕೆಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಇದರಿಂದ ಬೇಸತ್ತ ಯುವತಿ ಅತ್ಯಾಚಾರ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿದ್ದಳು.

ಯುವತಿ 2020ರ ಫೆಬ್ರವರಿಯಲ್ಲಿ ಯುವಕನ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಳು.
ಆಕೆ ನೀಡಿದ ದೂರಿನಲ್ಲಿ ಅವರು 2018ರಿಂದ ಸಂಬಂಧ ಹೊಂದಿದ್ದು, ಈ ವಿಚಾರ ತಮ್ಮ ಕುಟುಂಬಗಳಿಗೂ ತಿಳಿದಿತ್ತು. ಯಾವುದೇ ವಿರೋಧವೂ ಇರಲಿಲ್ಲ ಎಂದು ತಿಳಿಸಿದ್ದಳು. ಆಕೆಯ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಯುವತಿ ತಾನು ಗರ್ಭಿಣಿ ಎಂಬುದನ್ನು ತಿಳಿದು, ಅದನ್ನು ಆರೋಪಿಗೆ ತಿಳಿಸಿದ ಬಳಿಕ ಆತ ಅವಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದಾನೆ.

ತನ್ನ ಗರ್ಭಾವಸ್ಥೆಯ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸಲು ಇಷ್ಟಪಡದ ಕಾರಣ ಆಕೆ ತನ್ನ ಮನೆಯನ್ನು ತೊರೆದಿದ್ದಳು. 2020ರ ಜನವರಿ 27ರಂದು ಆಕೆ ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮವನ್ನೂ ನೀಡಿದ್ದಳು. 

ಬಳಿಕ ಜನವರಿ 30ರಂದು ಸಂತ್ರಸ್ತ ಯುವತಿ ಮಗುವನ್ನು ಕಟ್ಟಡವೊಂದರ ಮುಂದೆ ಬಿಟ್ಟು ಹೋಗಿದ್ದಳು. ಆಕೆ ಮಗುವನ್ನು ತ್ಯಜಿಸಿದಕ್ಕಾಗಿ ಆಕೆಯ ವಿರುದ್ಧ ಪೊಲೀಸರು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ