ನವದೆಹಲಿ : ಗಡಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಗಡಿ ವಿಚಾರವನ್ನು ಎರಡು ರಾಜ್ಯಗಳು ರಾಜಕೀಯ ಚರ್ಚಾ ವಿಷಯವನ್ನಾಗಿ ಮಾಡಬಾರದು.
ಈ ಸಮಸ್ಯೆ ಬಗೆಹರಿಸಲು ಶೀಘ್ರವೇ 6 ಮಂದಿ ಕೇಂದ್ರ ಸಚಿವರು ಇರುವ ತಟಸ್ಥ ಸಮಿತಿ ರಚಿಸಲಾಗುವುದು. ಅಲ್ಲಿಯವರೆಗೂ ನೀವು ಸುಮ್ಮನಿರಿ ಎಂದು ಇಬ್ಬರು ಸಿಎಂಗಳಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ. ಗಡಿಯಲ್ಲಿ ಶಾಂತಿಯನ್ನು ಸ್ಥಾಪಿಸಬೇಕಿದೆ. ನೀವೆಲ್ಲರೂ ಇದಕ್ಕೆ ಸಹಕರಿಸ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಸಭೆಯ ಬಳಿಕ ಬೊಮ್ಮಾಯಿ ಮಾತನಾಡಿ, ಜನವರಿಯಲ್ಲಿ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಸಣ್ಣ ಪುಟ್ಟ ವಿಚಾರಗಳ ಸಮಸ್ಯೆಗಳಿದ್ದರೆ ತಟಸ್ಥ ಸಮಿತಿಯಲ್ಲಿ ಚರ್ಚಿಸಿ ಸರಿ ಮಾಡಲು ಸೂಚಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರು ಮನವಿ ಮಾಡಿದ್ದಾರೆ.
ರಾಜಕೀಯ ಹೊರತಾಗಿ ಒಂದಾಗಿ ಇರುವ ಬಗ್ಗೆ ಹೇಳಿದ್ದಾರೆ. ಗಡಿಯಲ್ಲಿನ ಗಲಭೆ, ಪ್ರತಿಭಟನೆಗಳ ಬಗ್ಗೆ ನಿಗಾ ವಹಿಸಲು ಆಯಾ ರಾಜ್ಯದಲ್ಲಿ ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಿಸಲು ಹೇಳಿದ್ದಾರೆ ಎಂದು ತಿಳಿಸಿದರು.