ಪೊಲೀಯೋ ಡ್ರಾಪ್ ಸೇವಿಸಿ ಸಾವನ್ನಪ್ಪಿದ ಬಾಲಕ!
ಲಸಿಕೆ ಹಾಕಿದ ಅರ್ಧಗಂಟೆಯಲ್ಲಿ ಮಗು ವಿಲಕ್ಷಣವಾಗಿ ವರ್ತಿಸಲು ಆರಂಭಿಸಿತು. ನಂತರ ಪ್ರಜ್ಞಾಹೀನವಾಯಿತು. ತಕ್ಷಣ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನಿದ್ರೆ ಮಾಡುತ್ತಿದ್ದ ಕಾರಣ ಲಸಿಕೆ ಹಾಕಬೇಡಿ ಎಂದರೂ ಕೇಳದೇ ಆಶಾ ಕಾರ್ಯಕರ್ತೆಯರು ಬಲವಂತವಾಗಿ ಲಸಿಕೆ ಹಾಕಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದೀಗ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.