ಈ ಆಹಾರ ತಿಂದರೆ ಸುಖ ನಿದ್ರೆ ಗ್ಯಾರಂಟಿ

ಗುರುವಾರ, 21 ಸೆಪ್ಟಂಬರ್ 2017 (08:37 IST)
ಬೆಂಗಳೂರು: ನಿದ್ರೆ ಬರುತ್ತಿಲ್ಲವೆಂದು ರಾತ್ರಿಯೆಲ್ಲಾ ಒದ್ದಾಡುತ್ತೀರಾ? ಹಾಗಿದ್ದರೆ ನಿಮ್ಮ ಆಹಾರ ಕ್ರಮದಲ್ಲಿ ಕೊಂಚ ಬದಲಾವಣೆ ತನ್ನಿ. ನಿದ್ರೆ ಬರಿಸುವ ಆಹಾರ ಸೇವಿಸಿ. ಅವು ಯಾವುವು ತಿಳಿಯಬೇಕಾ? ಹಾಗಿದ್ದರೆ ಈ ಸ್ಟೋರಿ ಓದಿ.


ಬಾಳೆ ಹಣ್ಣು
ರಾತ್ರಿ ಮಲಗುವ ಮುಂಚೆ ಬಾಳೆ ಹಣ್ಣು ತಿಂದು ಹಾಲು ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಬಾಳೆ ಹಣ್ಣಿನಲ್ಲಿ ಪೊಟೇಷಿಯಂ ಮತ್ತು ಮ್ಯಾಗ್ನಿಶಿಯಂ ಅಂಶ ಸಾಕಷ್ಟಿದ್ದು, ಇದು ಮಾಂಸ ಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಇದರಿಂದ ಸುಖ ನಿದ್ರೆ ನಿಮ್ಮದಾಗಬಹುದು.

ಚೆರ್ರಿ ಹಣ್ಣು
ಚೆರ್ರಿ ಹಣ್ಣಿನಲ್ಲಿ ಮೆಲಟಿನ್ ಅಂಶ ಹೇರಳವಾಗಿರುತ್ತದೆ. ಇದು ನಮ್ಮ ನಿದ್ರೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಪ್ರತಿ ನಿತ್ಯ ಇದರ ಜ್ಯೂಸ್ ಕುಡಿದರೂ ಸಾಕು. ಸುಖ ನಿದ್ರೆ ನಿಮ್ಮದಾಗುತ್ತದೆ.

ಬಾದಾಮಿ
ರಾತ್ರಿ ಮಲಗುವ ಮುಂಚೆ ಬಾದಾಮಿ ತಿನ್ನುವುದು ಒಳ್ಳೆಯದು. ಬಾದಾಮಿಯಲ್ಲಿರುವ ಮ್ಯಾಗ್ನಿಶಿಯಂ ಅಂಶ ನಮ್ಮನ್ನು ಸುಖ ನಿದ್ರೆಗೆ ದೂಡುವುದಲ್ಲದೆ, ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತದೆ.

ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ಸಾಕಷ್ಟು ಕಾರ್ಬೋ ಹೈಡ್ರೇಟ್ ಮತ್ತು ಪೊಟೇಶಿಯಂ ಇದೆ. ಇದು ಮಾಂಸಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ