ಹೃದಯಾಘಾತ ತಡೆಯಬೇಕಾದರೆ ನೀವು ಹೀಗೆ ಮಾಡಲೇಬೇಕು!

ಸೋಮವಾರ, 18 ಸೆಪ್ಟಂಬರ್ 2017 (08:45 IST)
ಬೆಂಗಳೂರು: ಆಧುನಿಕ ಜೀವನದ ಶೈಲಿಯ ಪ್ರಭಾವವೋ ಇತ್ತೀಚೆಗೆ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯಲು ಏನು ಮಾಡಬೇಕು? ಇಲ್ಲಿ ನೋಡಿ!


ಚೆನ್ನಾಗಿ ತಿನ್ನಿ
ಪೋಷಕಾಂಶ ಭರಿತ ಆಹಾರ, ಹಣ್ಣು ಹಂಪಲುಗಳನ್ನು ಹೇರಳವಾಗಿ ಸೇವಿಸಿ. ಬೇಡದ ಕೊಬ್ಬಿನಂಶವಿರುವ ಆಹಾರವನ್ನು ಆದಷ್ಟು ಕಡಿಮೆ ಮಾಡಿ.

ನಿಯಮಿತ ವ್ಯಾಯಾಮ
ಆಹಾರ ಸೇವಿಸಿದ ಹಾಗೆಯೇ ದೇಹಕ್ಕೆ ವ್ಯಾಯಾಮವೂ ಬೇಕು. ಚಟುವಟಿಕೆಯಿದ್ದರೆ ಮಾತ್ರ ಲವಲವಿಕೆಯಿಂದ ಇರಲು ಸಾಧ್ಯ. ಚೆನ್ನಾಗಿ ತಿಂದು ಕೂತು ದೇಹ ಬೆಳೆಸಿದರೆ ಹೃದಯದ ಆರೋಗ್ಯ ಹಾಳಾಗುವುದು ಖಂಡಿತಾ. ಹಾಗಾಗಿ ನಮಗೆ ಗೊತ್ತಿರುವ ಸಣ್ಣ ಮಟ್ಟಿನ ವ್ಯಾಯಾಮ ಮಾಡುವುದು ಒಳ್ಳೆಯದು.

ಒತ್ತಡಕ್ಕೆ ಗುಡ್ ಬೈ ಹೇಳಿ
ದೈನಂದಿನ ಕೆಲಸದ ಒತ್ತಡವೋ, ಇನ್ನೇನೋ ಸಮಸ್ಯೆಗಳಿಂದ ಒತ್ತಡಕ್ಕೊಳಗಾಗುವುದನ್ನು ಆದಷ್ಟು ದೂರ ಮಾಡಿ. ಮನಸ್ಸು ಪ್ರಶಾಂತವಾಗಿರುವಂತೆ ನೋಡಿಕೊಳ್ಳಿ. ಇಷ್ಟದ ಹವ್ಯಾಸ ಬೆಳೆಸಿಕೊಳ್ಳಿ.

ನಿದ್ರೆ
ಉತ್ತಮ ನಿದ್ರೆಯೂ ಉತ್ತಮ ಆರೋಗ್ಯಕ್ಕೆ ದಾರಿ. ದಿನಕ್ಕೆ ಏಳರಿಂದ ಎಂಟು ಗಂಟೆ ಸುಖವಾದ ನಿದ್ರೆ ಮಾಡಿದರೆ ಹಲವು ರೋಗಗಳಿಗೆ ಪರಿಹಾರ.

ಮದ್ಯ, ಧೂಮಪಾನ ಬಿಡಿ
ಮದ್ಯಪಾನ, ಧೂಮಪಾನ ಮಾಡುವ ಅಭ್ಯಾಸವಿದ್ದರೆ ಇಂದೇ ಬಿಡಿ. ಇವೆರಡೂ ದೇಹಕ್ಕೆ ವಿಷವೇ ಸರಿ. ಹಲವು ರೋಗಗಳಿಗೆ ಇವೆರಡೇ ಕಾರಣ. ಹಾಗಾಗಿ ಇವೆರಡನ್ನೂ ಬಿಟ್ಟು ಆರೋಗ್ಯವಾಗಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ