ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಬಾಲಕ ಸಾವು!

ಗುರುವಾರ, 10 ನವೆಂಬರ್ 2022 (09:13 IST)
ಲಕ್ನೋ : ಕುದಿಯುತ್ತಿರುವ ಸಾಂಬಾರಿನ ಪಾತ್ರೆಯೊಳಗೆ ಬಿದ್ದು ಐದು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಕರಣ್ಪುರದ ಸುತಾರಿ ಗ್ರಾಮದ ನಿವಾಸಿ ಪ್ರಶಾಂತ್(5) ಮೃತ ಬಾಲಕ. ಈತ ತಂದೆ ದುಶೀಲ್ ಸಿಂಗ್. ವೃತ್ತಿಯಲ್ಲಿ ರೈತರಾಗಿದ್ದಾರೆ. ಮುಂಡನ್ ಕಾರ್ಯದ ಅಂಗವಾಗಿ ಅಡುಗೆ ಮಾಡಲಾಗುತ್ತಿತ್ತು.

ಆದರೆ ಬಾಲಕ ಪ್ರಶಾಂತ್ ಬಿಸಿ ಪಾತ್ರೆ ಇಡುತ್ತಿದ್ದ ಜಾಗದಲ್ಲಿ ಆಟವಾಡುತ್ತಿದ್ದ. ಆಟವಾಡುತ್ತಾ ಪ್ರಶಾಂತ್ ಜಿಗಿದಿದ್ದಾನೆ. ಈ ವೇಳೆ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಯೊಳಗೆ ಬಿದ್ದಿದ್ದಾನೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ