ಮಧ್ಯರಾತ್ರಿ ಗರ್ಲ್ ಫ್ರೆಂಡ್ ಮನೆಗೆ ಬಂದ ಅಪ್ರಾಪ್ತನಿಗೆ ಮನೆಯವರು ಮಾಡಿದ್ದೇನು ಗೊತ್ತಾ?!
ತಮ್ಮ ಮನೆ ಮಗಳ ಜತೆಗೆ ಬಾಲಕನನ್ನು ನೋಡಿದ ಮನೆಯವರು ಆತನ ಮೇಲೆ ಮಚ್ಚಿನಿಂದ ದಾಳಿ ಮಾಡಿ ಆತನ ಮನೆಯೆದುರೇ ಬಿಟ್ಟು ಹೋಗಿದ್ದರು. ಆದರೆ ತೀವ್ರ ಗಾಯಗೊಂಡಿದ್ದ ಬಾಲಕ ಆಸ್ಪತ್ರೆ ಸಾಗಿಸುವ ಮೊದಲೇ ಸಾವನ್ನಪ್ಪಿದ್ದ.
ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಗಿಯ ತಂದೆಯನ್ನು ಬಂಧಿಸಿದ್ದಾರೆ. ಈ ವೇಳೆ ಆ ಬಾಲಕ ತಮ್ಮ ಪುತ್ರಿಗೆ ಕಾಟ ಕೊಡುತ್ತಿದ್ದ. ಇದಕ್ಕೇ ಈ ಕೃತ್ಯವೆಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆದರೆ ಬಾಲಕಿಗೂ ಈ ಹುಡುಗನ ಮೇಲೆ ಪ್ರೀತಿಯಿತ್ತು ಎನ್ನಲಾಗಿದೆ.