ಪತ್ನಿಯ ಮೇಲಿನ ಸಿಟ್ಟಿಗೆ ಮೂವರು ಮಕ್ಕಳಿಗೆ ಈತ ನೀಡಿದ ಶಿಕ್ಷೆ ಕೇಳಿದರೆ ಶಾಕ್ ಆದೀತು!
ಪತ್ನಿ ತನ್ನ ಉಳಿದಿಬ್ಬರು ಮಕ್ಕಳೊಂದಿಗೆ ತವರಿಗೆ ಹೋದ ಸಿಟ್ಟಿನಲ್ಲಿ ಪತಿ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದೀಗ ಆರೋಪಿಯನ್ನು ಜೈಲಿಗಟ್ಟಲಾಗಿದೆ. ಮದ್ಯಪಾನ ಮಾಡಿದ್ದ ಮತ್ತಿನಲ್ಲಿ ಆರೋಪಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಅದೇ ಸಿಟ್ಟಿನಲ್ಲಿ ಪತ್ನ ಮಧ್ಯಪ್ರದೇಶದಲ್ಲಿರುವ ತನ್ನ ತವರು ಮನೆಗೆ ಇಬ್ಬರು ಮಕ್ಕಳೊಂದಿಗೆ ತೆರಳಿದ್ದಳು. ಆಕೆ ಮರಳಿ ಬಾರದ ಸಿಟ್ಟಿನಲ್ಲಿ ಪತಿ ಈ ನೀಚ ಕೃತ್ಯವೆಸಗಿದ್ದಾನೆ.