ಪತ್ನಿ ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಸಿಟ್ಟಿಗೆದ್ದ ಪತಿ ಮಾಡಿದ್ದೇನು?
ಬಾಬು(42) ಎಂಬಾತ ಕೊಲೆ ಆರೋಪಿ. ಈತ ತನ್ನ ಪತ್ನಿ ಸುಮತಿ (36) ಹಾಗೂ ಅತ್ತೆ ವಿಶಾಲಾಕ್ಷಿ (56) ಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರಿಗೂ ಮದುವೆಯಾಗಿ 15 ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಪತ್ನಿ ಸುಮತಿ ತವರು ಮನೆಯಲ್ಲಿದ್ದಳು. ಮನೆಗೆ ಮರಳುವಂತೆ ಪತಿ ಬಾಬು ಒತ್ತಾಯಿಸಿದರೂ ಕೇಳದೇ ಕೆಲವು ದಿನಗಳ ಹಿಂದಷ್ಟೇ ವಿಚ್ಛೇದನ ನೋಟಿಸ್ ಕಳುಹಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಬಾಬು ಪತ್ನಿಯ ತವರು ಮನೆಗೇ ಹೋಗಿ ಈ ಕೃತ್ಯವೆಸಗಿದ್ದಾನೆ. ನಂತರ ಅದೇ ಮನೆಯಲ್ಲಿ ತಾನೂ ನೇಣಿಗೆ ಶರಣಾಗಿದ್ದಾನೆ.